ದಯಾನಂದ್​ ಅಮಾನತು ಆದೇಶ ರದ್ದು ಪಡಿಸಿ: ಹೆಡ್ ಕಾನ್ಸ್​ಟೇಬಲ್​ ಏಕಾಂಗಿ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಏಕಾಏಕಿ ಮಾಡಿರುವ ದಯಾನಂದ್ ಅವರ ಸಸ್ಪೆಂಡ್ ರದ್ದುಪಡಿಸಬೇಕೆಂದು ರಾಜ್ಯಭವನ ಮುಂದೆ ಹೆಡ್​ ಕಾನ್ಸ್​ಟೇಬಲ್​ ಏಕಾಂಗಿ ಪ್ರತಿಭಟನೆ ನಡೆಸಿದರು.

ತೋಳಿಗೆ ಕಪ್ಪುಪಟ್ಟಿ ಧರಿಸಿ ಅಂಬೇಡ್ಕರ್ ಫೋಟೊ ಇಟ್ಟುಕೊಂಡು ರಾಜಭವನ ಮುಂದೆ ಪ್ರತಿಭಟನೆ ನಡೆಸಿದರು. ಅಮಾನತು ಮಾಡಿರುವ ದಯಾನಂದ್ ಅವರನ್ನು ಅಮಾನತುಗೊಳಿಸಿರುವ ಆದೇಶ ಕೂಡಲೇ ಹಿಂಪಡೆಯಬೇಕು ಹಾಗೂ ಪೊಲೀಸರಿಗೆ ರಕ್ಷಣೆ ನೀಡಬೇಕೆಂದು ನರಸಿಂಹರಾಜ್ ಅವರು ದೂರಿನಲ್ಲಿ ತಿಳಿಸಿದ್ಧಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಡ್ ಕಾನ್ಸ್​ಟೇಬಲ್​, ಆರ್​ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿರುವ ಸಂಬಂಧ ಆಯುಕ್ತರಾಗಿದ್ದ ದಯಾನಂದ ಅವರನ್ನು ಸರ್ಕಾರವು ಅಮಾನತು ಮಾಡಿರುವ ಆದೇಶವನ್ನು ಹಿಂಪಡೆದು ಪೊಲೀಸರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಪೊಲೀಸರು ಒಂದು ರೀತಿ ಬ್ರೋಕರ್​ಗಳಾಗಿದ್ದಾರೆ. ಈ ಕಡೆ ಕಾಂಗ್ರೆಸ್​ನವರು ಒದ್ದರೂ ಒದಿಸಿಕೊಳ್ಳಬೇಕು. ಬಿಜೆಪಿ ಒದ್ದರೂ ಒದಿಸಿಕೊಳ್ಳಬೇಕು. ಜೆಡಿಎಸ್​ನವರು ಗುದ್ದಿದ್ರು ಗುದ್ದಿಸಿಕೊಳ್ಳಬೇಕು. ಸಂಜೆ ಆದ್ರೆ ನಮ್ಮವರು ರಾಜಕಾರಣಿಗಳ ಮನೆ ಮುಂದೆ ಹೋಗಿ ಕೈಕಟ್ಟಿ ನಿಲ್ಲುತ್ತಿದ್ದಾರೆ. ದಯಾನಂದ್ ಸಾಹೇಬರು ಒಳ್ಳೆ ಕೆಲಸ ಮಾಡಿದ್ದಾರೆ. ಅವರನ್ನು ಅಮಾನತು ಮಾಡಿದ್ದು ಸರಿಯಿಲ್ಲ. ಹೀಗಾಗಿ ಅಮಾನತು ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ವಿಧಾನಸೌಧ ಪೊಲೀಸರು ಕಾನ್ಸ್​ಟೇಬಲ್​ ಅವರನ್ನು ವಶಕ್ಕೆ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!