ಹೊಸದಿಗಂತ ವರದಿ ಚಿತ್ರದುರ್ಗ:
ತಂಬಾಕು ಸೇವನೆಯಿಂದ ವಿಶ್ವದಾದ್ಯಂತ ಪ್ರತಿ ವರ್ಷ 60 ಲಕ್ಷಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆಂದು ಎಂದು ಚಿತ್ರದುರ್ಗದ ವೈದ್ಯರಾದ ಶ್ರೀನಿವಾಸ ಹೇಳಿದರು.
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ, ತಂಬಾಕಿನಲ್ಲಿರುವ ನಿಕೋಟಿನ್ ಎಂಬ ಮಾದಕ ವಸ್ತು ವ್ಯಸನವಾಗಿಸುತ್ತದೆ. ಎಂಬ ಕಟು ಸತ್ಯಅರ್ಥ ಮಾಡಿಕೊಳ್ಳಬೇಕು. ಹದಿ ಹರೆಯದವರು ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡಲು ನೇರ ಹಾಗೂ ಪರೋಕ್ಷವಾಗಿ ಜಾಹಿರಾತುಗಳು ಉತ್ತೇಜನ ನೀಡುತ್ತವೆ ಎಂದಿದ್ದಾರೆ.
ಸಾಮಾನ್ಯವಾಗಿ 18 ವಯಸ್ಸಿನಿಂದ ಯುವಕರು ತಂಬಾಕು ಉತ್ಪನ್ನ ಸೇವನೆಯನ್ನು ಆರಂಭಿಸುವುದಾಗಿ ಅಂದಾಜಿಸಲಾಗಿದೆ. ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಕ ಬೀರುವುದರೊಂದಿಗೆ ಕ್ಯಾನ್ಸರ್ , ಹೃದಯ ಶ್ವಾಸ ಸಂಬಂಧಿ ಇತ್ಯಾದಿ ಕಾಯಿಲೆಗಳು ಬರುತ್ತವೆ ಎಂದರು.