ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಅಗ್ನಿಸಾಕ್ಷಿ’, ‘ಸೀತಾರಾಮ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ವೈಷ್ಣವಿ ಗೌಡ ಅವರು ಹಸೆಮಣೆ ಏರಿದ್ದಾರೆ. ಬಹಳ ಗ್ರ್ಯಾಂಡ್ ಆಗಿ ಅವರ ಮದುವೆ ನೆರವೇರಿದೆ. ಮದುವೆಯ ಫೋಟೋಗಳು ವೈರಲ್ ಆಗಿವೆ.
ಸಿಕ್ಕಾಪಟ್ಟೆ ಪ್ರಪೋಸಲ್ಸ್ಗಳನ್ನು ರಿಜೆಕ್ಟ್ ಮಾಡಿ ಕಡೆಗೆ ವೈಷ್ಣವಿ ನಾರ್ಥ್ ಇಂಡಿಯನ್ ಹುಡುಗನೊಬ್ಬನನ್ನು ಮದುವೆ ಆಗಿದ್ದಾರೆ.
ವೈಷ್ಣವಿ ಗೌಡ ಅವರು ಮದುವೆ ಆಗಿರುವ ಹುಡುಗನ ಹೆಸರು ಅನುಕೂಲ್ ಮಿಶ್ರಾ. ಏರ್ಫೋರ್ಸ್ ಆಫೀಸರ್ ಆಗಿ ಅವರು ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಮಿಶ್ರಾ ಮತ್ತು ವೈಷ್ಣವಿ ಗೌಡ ಅವರದ್ದು ಲವ್ ಮ್ಯಾರೇಜ್ ಅಲ್ಲ, ಅಪ್ಪಟ ಅರೇಂಜ್ ಮ್ಯಾರೇಜ್.