ದೇಶದ ಆರ್ಥಿಕತೆ ಮೇಲೆ ಭಾರತ-ಪಾಕ್ ಸಂಘರ್ಷ ಪರಿಣಾಮ ಬೀರಿದೆಯೇ: ಏನಂದ್ರು ಆರ್‌ಬಿಐ ಗವರ್ನರ್?

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆ ಬಳಿಕದ ಭಾರತ ಪಾಕ್ ನಡುವಿನ ಸಂಘರ್ಷದ ಬೆಳವಣಿಗೆಗಳಿಂದ ದೇಶದ ಆರ್ಥಿಕತೆಗೆ ಯಾವುದೇ ಪೆಟ್ಟುಬಿದ್ದಿಲ್ಲ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸ್ಪಷ್ಟಪಡಿಸಿದ್ದಾರೆ.
ಸಂಘರ್ಷದ ತೀವ್ರತೆಯಿದ್ದ ಸಂದರ್ಭದ ಕೆಲವು ದಿನಗಳ ಕಾಲ ಕೇವಲ ಆ ಪ್ರದೇಶಗಳಲ್ಲಿ ಮಾತ್ರ ಬೆಲೆ ಏರಿಕೆ ಕಂಡುಬಂದಿತ್ತು. ಇದೀಗ ಅಲ್ಲಿಯೂ ಪರಿಸ್ಥಿತಿ ಮತ್ತೆ ಮೊದಲಿನಂತಾಗಿದೆ ಈ ಸಂಘರ್ಷವು ದೇಶದ ಆರ್ಥಿಕತೆಯ ಮೇಲೆ ಅತಿ ಕಡಿಮೆ ಪ್ರಮಾಣದ ಪರಿಣಾಮವನ್ನಷ್ಟೇ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಭಾರತದ ಹಲವೆಡೆ ವಿಮಾನಯಾನ ವ್ಯತ್ಯಯದ ಕಾರಣ ಕೆಲವು ದಿನಗಳ ಕಾಲ ಆರ್ಥಿಕತೆಯ ಮೇಲೆ ಅದರ ಹೊಡೆತ ಬಿದ್ದಿತ್ತು, ಆದರೆ ಅದರಿಂದ ಯಾವುದೇ ದೊಡ್ಡ ಪ್ರಮಾಣದ ನಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!