SHOCKING | ಬಾಯ್‌ಫ್ರೆಂಡ್‌ ಜೊತೆ ರೊಮ್ಯಾನ್ಸ್‌ ವೇಳೆ ಸಿಕ್ಕಿಬಿದ್ದ ಪತ್ನಿ: ಕುತ್ತಿಗೆ ಕತ್ತರಿಸಿ ಠಾಣೆಗೆ ತಂದ ಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಾ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿಯನ್ನ ಕೊಂದು, ಆಕೆಯ ರುಂಡದೊಂದಿಗೆ ಪತಿ ಪೊಲೀಸ್‌ ಠಾಣೆಗೆ ತೆರೆಳಿ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ.

ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಹೆನ್ನಾಗರ ಸಮೀಪದ ಕಾಚನಾಯಕನಹಳ್ಳಿ ನಿವಾಸಿ ಶಂಕರ್ (28) ಪತ್ನಿಯ ರುಂಡ ಕಡಿದ ಆರೋಪಿ.

ಹೆಬ್ಬಗೋಡಿ ನಿವಾಸಿ ಮಾನಸ (26) ಕೊಲೆಯಾದ ಮಹಿಳೆ. ಪತ್ನಿ ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆ‌ ಪತಿ ಆಕೆಯ ರುಂಡ ಕಡಿದು ಸೂರ್ಯನಗರ ಠಾಣೆಗೆ ಕೊಂಡೊಯ್ದಿದ್ದಾನೆ. ಬಳಿಕ ಪೊಲೀಸರು ಆತನನ್ನ ಬಂಧಿಸಿದ್ದಾರೆ.

ಮಾನಸ ಮತ್ತು ಶಂಕರ್‌ ಪ್ರೀತಿಸಿ ಮದುವೆಯಾಗಿದ್ದರು. ತಿಂಗಳ ಹಿಂದಷ್ಟೇ ಹೀಲಲಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್‌ ಆಗಿದ್ದರು. ಇದೇ ತಿಂಗಳ 3ನೇ ತಾರೀಖು ಶಂಕರ್‌ ಕೆಲಸದ ನಿಮಿತ್ತ ತೆರಳಿದ್ದ, ಹೊರಡುವಾಗ ಮಾರನೆ ದಿನ ಬರುವುದಾಗಿ ಹೇಳಿದ್ದ. ಆದ್ರೆ ಕೆಲಸ ಬೇಗ ಮುಗಿದ ಹಿನ್ನೆಲೆ ಪತ್ನಿ ಒಬ್ಬಳೆ ಇರ್ತಾಳೆಂದು ತಡರಾತ್ರಿಯೇ ವಾಪಸ್‌ ಆಗಿದ್ದ. ಆದ್ರೆ ಗಂಡನ ಚಿಂತೆಯೇ ಇಲ್ಲದೇ ಪತ್ನಿ ಪ್ರಿಯಕರನೊಂದಿಗೆ ಚಕ್ಕಂದವಾಡ್ತಾ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಳು.

ಇದರಿಂದ ಆಕ್ರೋಶಗೊಂಡ ಪತಿ ಶಂಕರ್‌ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ನೀನು ನನಗೆ ಬೇಡ ಅಂತ ಪ್ರಿಯಕರನ ಜೊತೆಗೇ ಕಳಿಸಿದ್ದ. ಆದ್ರೆ ಪತ್ನಿ ಮಾನಸ ಮಾತ್ರ ಪದೇ ಪದೇ ಟಾರ್ಚರ್‌ ಮಾಡುತ್ತಿದ್ದಳಂತೆ. ನಿನ್ನೆ ರಾತ್ರಿ ಸಹ ಮನೆಗೆ ಬಂದು ಗಲಾಟೆ ಮಾಡಿದ್ದಳಂತೆ. ಇದರಿಂದ ಬೇಸತ್ತ ಪತಿ ಆಕೆಯ ತಲೆ ಕಡೆದು ಠಾಣೆಗೆ ಸೂರ್ಯನಗರ ಪೊಲೀಸ್‌ ಠಾಣೆಗೆ ತೆಗದುಕೊಂಡು ಬಂದಿದ್ದಾನೆ. ನಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!