ಸಕಲೇಶಪುರ ಶಿಸ್ತು ನಿರ್ವಹಣಾ ಕೇಂದ್ರ ಇದೀಗ ಅನೈತಿಕ ಚಟುವಟಿಕೆಗಳ ತಾಣ!!

ಹೊಸದಿಗಂತ ವರದಿ ಹಾಸನ : 

ಕಲೇಶಪುರ ತಾಲ್ಲೂಕಿನ ಕಾನೂನು ಸುವ್ಯವಸ್ಧೆ ನಿರ್ವಹಣಾ ಕೇಂದ್ರವಾಗಿದ್ದ ಪಟ್ಟಣದ ಬಾಳೆಗದ್ದೆ ಬಡಾವಣೆಯಲ್ಲಿದ್ದ ಗ್ರಾಮಾಂತರ ಪೋಲೀಸ್ ಠಾಣೆ ಹಳೆಯ ಕಟ್ಟಡ ಮತ್ತು ಯಾರೂ ವಾಸವಿಲ್ಲದ ವಸತಿ ಗೃಹಗಳು ಈಗ ಪುಂಡ, ಪುಡಾರಿಗಳ ಅನೈತಿಕ ಚಟುವಟಿಕೆಗಳ ಅಡ್ಡೆಗಳಾಗಿ ಮಾರ್ಪಟ್ಟಿದೆ.

ಕಳೆದ ಹತ್ತು ವರ್ಷಗಳ ಹಿಂದೆ ಪಟ್ಟಣದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಗೆಂದು ಹೊಸ ಕಟ್ಟಡ ನಿರ್ಮಾಣವಾದ ಬಳಿಕ ಹಳೆ ಕಟ್ಟಡ ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಯಿತು. ಸಮೀಪದಲ್ಲೇ ಇರುವ ವಸತಿ ಗೃಹಗಳಲ್ಲಿ ಕೆಲವು ಪೋಲೀಸರು ವಾಸವಿದ್ದರಾದರೂ ನಂತರದ ದಿನಗಳಲ್ಲಿ ಪೋಲೀಸ್ ವಸತಿ ಗೃಹಕ್ಕೆ ಸ್ಥಳಾಂತರಗೊಂಡರು. ನಿರ್ವಹಣೆ ಇಲ್ಲದೇ ಸೋರುತ್ತಿದ್ದ ಈ ಕಟ್ಟಡದಲ್ಲಿ ವಾಸವಿರಲು ಯಾರೂ ಸಿದ್ಧರಿಲ್ಲದ ಕಾರಣ ಅವುಗಳು ಪಾಳು ಬಿದ್ದವು.

ಮೊದಲೇ ಶಿಧಿಲಾವಸ್ಥೆಯಲ್ಲಿದ್ದ ಈ ಪಾಳು ಕಟ್ಟಡದ ಕಿಟಕಿ ಬಾಗಿಲುಗಳು ಮುರಿತು ಹೋಗಿದ್ದು, ಯಾವಾಗ ಕಸಿದು ಬೀಳುತ್ತದೆಯೋ ಗೊತ್ತಿಲ್ಲ. ಇದನ್ನೇ ತಮ್ಮ ಅನೈತಿಕ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವ ಕೆಲವರು ಹಗಲು, ರಾತ್ರಿಯೆನ್ನದೇ ಮಾದಕ, ಮದ್ಯ ವ್ಯಸನ ಇನ್ನಿತರ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ಸಂಪೂರ್ಣ ಶಿಥಿಲಗೊಂಡ ಈ ಕಟ್ಟಡಗಳು ಬಳಕೆಗೆ ಬಾರದ್ದಾಗಿರುವ ಕಾರಣ ಕುಡಲೇ ತೆರವು ಮಾಡುವುದೇ ಸೂಕ್ತ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!