ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಈಗ ಮತ್ತೆ ಚರ್ಚೆಗೆ ಬಂದಿದ್ದಾರೆ. ನಾಗ ಚೈತನ್ಯ ಜೊತೆ ವಿಚ್ಛೇದನದ ನಾಲ್ಕು ವರ್ಷಗಳ ನಂತರ, ಅವರ ನಿಜ ಜೀವನದ ಪ್ರೀತಿ ಆರಂಭಾವಾಗಿದ್ದ ಚಿತ್ರ ‘ಯೇ ಮಾಯಾ ಚೇಸಾವೆ’ (YMC) ಟ್ಯಾಟೂ ತೆಗೆದುಹಾಕಿದ್ದಾರೆ.
ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2017ರಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ಆದರೆ ಅವರ ಈ ಸುಂದರ ವಿವಾಹ 2021ರಲ್ಲಿ ಕೊನೆಯಾಯಿತು. ಮದುವೆಯಾಗಿ ಮೂರು ವರ್ಷಗಳ ನಂತರ ಇವರು ವಿಚ್ಛೇದನೆ ಘೋಷಿಸಿದರು.
ಸಮಂತಾ ಅವರು ತಮ್ಮ ಲವ್ ಸಂಬಂಧವಾಗಿ ಮೂರು ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದರು. ಆದರೆ ನಟಿ ಈಗ ಡಿವೋರ್ಸ್ ಆಗಿ ನಾಲ್ಕು ವರ್ಷದ ನಂತರ ಎಲ್ಲ ಟ್ಯಾಟೂ ಅಳಿಸಿಕೊಂಡಿದ್ದಾರೆ. ಇತ್ತೀಚಿನ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ನಟಿ ಬ್ಯಾಕ್ಲೆಸ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಅಡಗಿಸಲು ಏನೂ ಇಲ್ಲ ಎಂದು ಬರೆದು ನಟಿ ಬೆನ್ನು ತಿರುಗಿಸಿ ಹೋಗಿದ್ದಾರೆ.
ಈ ವಿಡಿಯೋ ದಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು ಅಳಿಸಿ ಹೋದ ಟ್ಯಾಟೂ. ಸಮಂತಾ ಬೆನ್ನಲ್ಲಿದ್ದ ವೈಎಂಸಿ ಟ್ಯಾಟೂ ಈಗ ಇಲ್ಲ. ಇನ್ನೂ ಕೆಲವರು ಇದನ್ನು ಜಾಹೀರಾತಿಗಾಗಿ ಫೌಂಡೇಷನ್ ಹಾಕಿ ಮರೆಮಾಡಲಾಗಿದೆ ಎಂದಿದ್ದಾರೆ. ಆದರೆ ಸದ್ಯ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ನಾಗ ಚೈತನ್ಯ ಶೋಭಿತಾ ಧುಲಿಪಾಲ ಅವರನ್ನು ಮದುವೆ ಆಗಿದ್ದಾರೆ. ಇತ್ತ ಸಮಂತಾ ಬಾಲಿವುಡ್ ನಿರ್ದೇಶಕ ರಾಜ್ ನಿಡಿಮೊರು ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರು ಕೂಡ ತಮ್ಮ ಜೀವನದಲ್ಲಿ ಮೂವ್ ಆನ್ ಆಗಿದ್ದಾರೆ.