ಮೇಷ
ನಿಮ್ಮ ವ್ಯವಹಾರ ಸುಧಾರಿಸಲು ಸ್ವಲ್ಪ ಕಾಲ ಬೇಕು. ತಾಳ್ಮೆಯಿಂದ ಕಾಯುವುದು ಅನಿವಾರ್ಯ. ದುಡುಕಿನ ಕ್ರಮ ಬೇಡ.
ವೃಷಭ
ನಿಮ್ಮ ಪರಿಶ್ರಮಕ್ಕೆ ಸೂಕ್ತ ಫಲ ದೊರಕಲಿದೆ. ನಿರಾಶೆ ಬೇಡ. ಸಣ್ಣ ಹಿನ್ನಡೆಗೆ ಹಿಂಜರಿಯದಿರಿ. ದೊಡ್ಡ ಸಾಧನೆಯ ಫಲ ಭವಿಷ್ಯದಲ್ಲಿ ಕಾದಿದೆ.
ಮಿಥುನ
ದೀರ್ಘಾವಽ ಆರ್ಥಿಕ ಯೋಜನೆ ನಿಮಗೆ ಸೂಕ್ತವೆನಿಸದು. ಖಚಿತ ಲಾಭದ ದೃಷ್ಟಿಯಿಟ್ಟೇ ಹೂಡಿಕೆ ಮಾಡಿ. ಕೌಟುಂಬಿಕ ಸಮಾಧಾನ.
ಕಟಕ
ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಕುಟುಂಬಸ್ಥರ ಜತೆ ಸಮಯ ಕಳೆಯಿರಿ. ವಾಗ್ವಾದಕ್ಕೆ ಆಸ್ಪದ ಕಲ್ಪಿಸದಿರಿ.
ಸಿಂಹ
ಲಾಭವೂ ಇಲ್ಲ, ನಷ್ಟವೂ ಇಲ್ಲದ ದಿನವಿದು. ಆಪ್ತರ ಜತೆ ಕಾಲ ಕಳೆಯುವ ಅವಕಾಶ. ದೈನಂದಿನ ವೃತ್ತಿ ಒತ್ತಡ ಇಂದು ಬಾಽಸದು.
ಕನ್ಯಾ
ಖಾಸಗಿ ಬದುಕಿನಲ್ಲಿ ಅಪಸ್ವರ ಏಳಬಹುದು. ಅದನ್ನು ಆರಂಭದಲ್ಲೆ ಸರಿಪಡಿಸಿರಿ. ಸಂಬಂಧದಲ್ಲಿ ಹುಳುಕು ಮೂಡದಂತೆ ನೋಡಿಕೊಳ್ಳಿ.
ತುಲಾ
ಆರ್ಥಿಕವಾಗಿ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಇದು ಸೂಕ್ತ ದಿನವಲ್ಲ. ಖಾಸಗಿ ಬದುಕಿನಲ್ಲಿ ಏರುಪೇರು ಅನುಭವಿಸುವಿರಿ.
ವೃಶ್ಚಿಕ
ಯಾವುದೋ ವಿಷಯ ಭಾವೋದ್ವಿಗ್ನತೆ ಸೃಷ್ಟಿಸಬಹುದು. ಆಪ್ತರಿಂದ ಟೀಕೆ ಕೇಳುವಿರಿ. ನಿರೀಕ್ಷಿಸಿದ ಕೆಲಸ ಸಾಧ್ಯವಾಗದು.
ಧನು
ವ್ಯವಹಾರ ಸುಗಮ. ಉದ್ದಿಮೆಯಲ್ಲಿ ಲಾಭ. ಆರೋಗ್ಯ ಸಮಸ್ಯೆ ನಿವಾರಣೆ. ಬಂಧುಗಳ ಸಂಗದಲ್ಲಿ ಸಂತೋಷ ಕಾಣುವಿರಿ.
ಮಕರ
ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ಪ್ರಭಾವಿಗಳ ಸಂಗದಿಂದ ಲಾಭ ಪಡೆಯುವಿರಿ. ಕೌಟುಂಬಿಕ ಪರಿಸ್ಥಿತಿ ಹಿತಕರ. ಎಲ್ಲರಿಂದ ಸಹಕಾರ.
ಕುಂಭ
ನೀವಿಂದು ಹಣದ ವ್ಯವಹಾರದಲ್ಲಿ ಎಚ್ಚರ ವಹಿಸಿರಿ. ನಿರ್ಲಕ್ಷ್ಯವು ನಷ್ಟಕ್ಕೆ ಕಾರಣವಾದೀತು. ಕೌಟುಂಬಿಕ ಪರಿಸರ ಸೌಹಾರ್ದಕರ.
ಮೀನ
ಉಲ್ಲಾಸದ ದಿನ. ಬಂಧುಮಿತ್ರರ ಜತೆ ಆತ್ಮೀಯ ಕಾಲಕ್ಷೇಪ. ಹರಿತ ವಸ್ತುಗಳ ಜತೆ ವ್ಯವಹರಿಸುವಾಗ ಎಚ್ಚರವಿರಲಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ