ಮದುವೆ ಎಂಬುದು ಕೇವಲ ಒಂದು ವೈದಿಕ ಸಂಸ್ಕಾರವಲ್ಲ, ಅದು ಜೀವನದ ಯಾನಕ್ಕೆ ಜೊತೆಗಾರನಾಗುವ ನಂಬಿಕೆಯ ಒಪ್ಪಂದ. ಕಾಲದ ಕಳೆದಂತೆ, ದಶಕಗಳಿಂದ ಒಟ್ಟಿಗೆ ಸಾಗಿದ ದಂಪತಿಗಳ ಸಂಬಂಧ ಇನ್ನಷ್ಟು ಗಾಢವಾಗಬೇಕಾದರೆ, ಕೆಲವೊಮ್ಮೆ ಬಿರುಕು ಮೂಡುವುದು ಸಹಜವಾಗಿ ತೋರುತ್ತದೆ. ಅನೇಕ ವರ್ಷಗಳ ಸಾಮರಸ್ಯದ ಬಳಿಕವೂ ಕೆಲವೊಮ್ಮೆ ವಿಚ್ಛೇದನದ ನಿರ್ಧಾರವು ಅಚ್ಚರಿಯ ಸಂಗತಿಯಂತೆ ಅನಿಸಬಹುದು. ಆದರೆ ನಂಬಿಕೆ, ಭಾವನೆ, ಗುರಿ, ಹಾಗೂ ವ್ಯಕ್ತಿತ್ವಗಳಲ್ಲಿ ಬರುವ ಬದಲಾವಣೆಗಳ ನಡುವೆ ಹಲವಾರು ಅಪ್ರತ್ಯಕ್ಷ ಕಾರಣಗಳು ಅಡಗಿರುವುದು ಸಾಮಾನ್ಯ.
ಸಂಬಂಧದಲ್ಲಿ ಭಾವನಾತ್ಮಕ ದೂರತೆ (Emotional Disconnect)
ವರ್ಷಗಳ ಬಳಿಕ ಭಾವನೆಗಳು ಕುಗ್ಗಿ, ಮನಸ್ಸು ಬೆಸೆದ ಅಭಾವವು ವಿಚ್ಛೇದನಕ್ಕೆ ದಾರಿ ಮಾಡಬಹುದು.
ಬದುಕಿನ ಗುರಿಗಳು ಬದಲಾಗುವುದು (Life goals change)
ವಯಸ್ಸು ಹೆಚ್ಚಾಗುವಂತೆ ಜೀವನದ ಗುರಿಗಳು ಬದಲಾಗಬಹುದು. ಈ ಬದಲಾವಣೆಗಳು ದಾಂಪತ್ಯದಲ್ಲಿ ಅಸಮ್ಮತಿ ಉಂಟುಮಾಡುತ್ತವೆ.
ಆರ್ಥಿಕ ಒತ್ತಡ ಅಥವಾ ಸ್ವಾತಂತ್ರ್ಯ ( Financial Stress)
ಇಬ್ಬರು ಉದ್ಯೋಗಸ್ಥರಾಗಿದ್ರೆ ಅಥವಾ ನಿವೃತ್ತರಾದ ಬಳಿಕ, ಹಣದ ವಿಚಾರದಲ್ಲಿ ಭಿನ್ನಮತ ಉಂಟಾಗಬಹುದು.
ಆರೋಗ್ಯ ಸಮಸ್ಯೆಗಳು ಮತ್ತು ಆರೈಕೆ ತಾರತಮ್ಯ (Health issues and care discrimination)
ಒಬ್ಬರು ಇನ್ನೊಬ್ಬರ ಆರೈಕೆಯಲ್ಲಿ ನಿಷ್ಠೆ ಇಲ್ಲದಿದ್ದರೆ, ನಿಕಟತೆಯ ಕೊರತೆಯುಂಟುಮಾಡಬಹುದು.
ನಿವೃತ್ತಿ ನಂತರದ ಖಾಲಿತನ (Empty Nest Syndrome)
ಮಕ್ಕಳು ತಮ್ಮ ಬದುಕಿನಿಂದ ದೂರಾದಬಳಿಕ ಖಾಲಿತನ ಭಾಸವಾಗಬಹುದು, ಇದರ ಪರಿಣಾಮವಾಗಿ ಅನುರಾಗ ಕಡಿಮೆ ಆಗಬಹುದು.
ವಿಚ್ಛೇದನವು ಯಾವಾಗಲೂ ಏಕಾಏಕಿ ನಡೆಯದು. ಭಾವನೆಗಳ ಹಿನ್ನಡೆ, ಬದಲಾದ ನಿರೀಕ್ಷೆಗಳು ಮತ್ತು ಸಂಬಂಧದ ನಿರ್ವಹಣೆಯ ಕೊರತೆಯೇ ಹೆಚ್ಚಾಗಿ ಕಾರಣವಾಗುತ್ತವೆ. ಸಮಾಲೋಚನೆ ಮತ್ತು ಸಂವಹನದಿಂದ ಈ ಸಮಸ್ಯೆಗಳನ್ನು ಹೆಚ್ಚಿನ ಮಟ್ಟಿಗೆ ತಡೆಗಟ್ಟಬಹುದು.