ಮಚ್ಚಾ ಟೀ ಒಂದು ಜಪಾನೀ ಹಸಿರು ಟೀ ಪುಡಿ ಆಗಿದ್ದು, ಇತ್ತೀಚೆಗೆ ಇದು ಬಹಳಷ್ಟು ಜನಪ್ರಿಯವಾಗಿದೆ. ಮಚ್ಚಾ ಟೀ ಸೇವನೆಯು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹೀಗಾಗಿ ಇದನ್ನು ದಿನಚರಿಯಲ್ಲೇ ಸೇರಿಸಿಕೊಳ್ಳುವುದು ಉತ್ತಮ ಎನ್ನಲಾಗಿದೆ.
ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ (Boosts energy and focus):
ಮಚ್ಚಾ ಟೀ ನಲ್ಲಿರುವ ಕ್ಯಾಫಿನ್ ಮತ್ತು ಎಲ್-ಥಿಯನಿನ್ ಎನ್ನುವ ಅಂಶಗಳು ಒಟ್ಟಿಗೆ ಕಾರ್ಯನಿರ್ವಹಿಸಿ, ದೀರ್ಘಕಾಲ ಶಕ್ತಿ ನೀಡುತ್ತದೆ ಮತ್ತು ಮನಸ್ಸನ್ನು ಏಕಾಗ್ರಗೊಳಿಸುತ್ತವೆ. ಕಾಫಿ ಬದಲು ಮಾಚಾ ಉತ್ತಮ ಆಯ್ಕೆ.
ಶಕ್ತಿವರ್ಧಕ ಆಂಟಿಆಕ್ಸಿಡೆಂಟ್‌ಗಳ ಮೂಲ (Rich in antioxidants):
ಮಚ್ಚಾ ಟೀನಲ್ಲಿರುವ ಆಂಟಿಆಕ್ಸಿಡೆಂಟ್ ದೇಹದಲ್ಲಿ ಉಂಟಾಗುವ ವಿಷಕ್ರಿಯೆಗಳನ್ನು ತಡೆಯುತ್ತದೆ. ಇದು ರೋಗಪ್ರತಿರೋಧಕ ಶಕ್ತಿಯನ್ನು ಬೆಳೆಸುತ್ತದೆ.
ಮನಸ್ಸಿಗೆ ಶಾಂತಿ ನೀಡುತ್ತದೆ (Promotes relaxation and calmness):
ಎಲ್-ಥಿಯನಿನ್ ಎಂಬ ಅಮೈನೋ ಆಮ್ಲವು ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿಯ ಅನುಭವ ನೀಡುತ್ತದೆ.
ಬೊಜ್ಜು ಕಡಿಮೆ ಮಾಡುತ್ತೆ (Aids in weight loss):
ಮಚ್ಚಾ ಟೀ ಕಡಿಮೆ ಕ್ಯಾಲೊರೀ ಇರುವುದರಿಂದ, ಇದರ ಸೇವನೆಯು ಮೆಟಾಬಾಲಿಸಂ ಅನ್ನು ಹೆಚ್ಚಿಸಿ ಕೊಬ್ಬು ಕರಗಿಸುವಲ್ಲಿ ಸಹಾಯಕವಾಗುತ್ತದೆ.
ಹೃದಯ ಆರೋಗ್ಯಕ್ಕೆ ಉತ್ತಮ (Good for heart health):
ನಿಯಮಿತವಾಗಿ ಮಚ್ಚಾ ಟೀ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದಯ ಸಂಬಂಧಿ ಕಾಯಿಲೆಗಳ ತೀವ್ರತೆಯನ್ನು ತಗ್ಗಿಸುತ್ತದೆ.
ಮಚ್ಚಾ ಟೀ ಆರೋಗ್ಯದತ್ತ ಹಾಕುವ ಮೊದಲ ಹೆಜ್ಜೆಯಾಗಿದೆ. ದಿನದ ಮೊದಲು ಅಥವಾ ಮಧ್ಯಾಹ್ನದ ವೇಳೆ ಒಂದು ಕಪ್ ಮಚ್ಚಾ ಟೀ ಸೇವಿಸಿದರೆ ದೇಹ ಮತ್ತು ಮನಸ್ಸು ಚುರುಕಾಗುತ್ತದೆ. ಆದ್ದರಿಂದ ಇದರ ಲಾಭ ಪಡೆಯಲು ನೀವು ಕೂಡ ಇದನ್ನು ನಿಮ್ಮ ಆಹಾರಪಟ್ಟಿಯಲ್ಲಿ ಸೇರಿಸಬಹುದು.