ಸಂಜೆ ತಿಂಡಿಗೆ ಚಟ್ ಪಟ ಆಗಿ, ಸುಲಭವಾಗಿ ತಯಾರಿಸಬಹುದಾದ ರುಚಿಕರ ತಿಂಡಿ ಬೇಕಾ? ಹಾಗಾದ್ರೆ ಆಲೂಗಡ್ಡೆಯಿಂದ ತಯಾರಿಸಬಹುದಾದ “ಪೊಟೇಟೊ ಪ್ಯಾನ್ಕೇಕ್” ಒಂದು ಬೆಸ್ಟ್ ಆಯ್ಕೆ. ಹೊರಗಿನಿಂದ ಕ್ರಿಸ್ಪಿಯಾಗಿದ್ದು, ಒಳಗಿಂದ ಮೃದುವಾಗಿದೆ. ಚಟ್ನಿ ಅಥವಾ ಟೊಮಾಟೋ ಕೆಚಪ್ ಜೊತೆಗೆ ಇದು ಬಹಳ ರುಚಿಯಾಗಿರುತ್ತೆ.
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 3
ಗೋಧಿಹಿಟ್ಟು – 2 ಟೇಬಲ್ ಸ್ಪೂನ್
ಕಾಳುಮೆಣಸು ಪುಡಿ – ½ ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – ½ ಟೀಸ್ಪೂನ್ (ಐಚ್ಛಿಕ)
ಹಸಿಮೆಣಸು – 1 (ಸಣ್ಣದಾಗಿ ಕತ್ತರಿಸಿಕೊಳ್ಳಿ)
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಸ್ವಲ್ಪ
ಮಾಡುವ ವಿಧಾನ:
ಮೊದಲು ಆಲೂಗಡ್ಡೆ ತುರಿದು ಇಟ್ಟುಕೊಳ್ಳಿ. ಅದಕ್ಕೆ ಗೋಧಿಹಿಟ್ಟು, ಕಾಳುಮೆಣಸು ಪುಡಿ, ಚಿಲ್ಲಿ ಫ್ಲೇಕ್ಸ್, ಉಪ್ಪು, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಸೇರಿಸಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ.
ಈ ಒಂದು ಪಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಂದು ಸೌಟ್ ಹಿಟ್ಟು ತೆಗೆದು ಪ್ಯಾನ್ಕೇಕ್ ಗಳಂತೆ ಮಾಡಿ. ಎರಡು ಬದಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿದರೆ ಪೊಟೇಟೊ ಪ್ಯಾನ್ಕೇಕ್ ರೆಡಿ.