2, 4, 6, 7, 9ನೇ ತರಗತಿ ಮಕ್ಕಳಿಗೆ ಟ್ರಾಫಿಕ್ ಬಗ್ಗೆ ಪಾಠ! ಏನಿದು ಹೊಸ ಪ್ಲ್ಯಾನ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಶಾಲೆಯಿಂದಲೇ ಮಕ್ಕಳಿಗೆ ಟ್ರಾಫಿಕ್‌ ರೂಲ್ಸ್‌, ರಸ್ತೆ ನೀತಿ ಬಗ್ಗೆ ಪಾಠ ಹೇಳಿಕೊಟ್ಟರೆ ಮುಂದೆ ಎಷ್ಟೊಂದು ಅನಾಹುತಗಳನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಟ್ರಾಫಿಕ್‌ ಪಾಠ ಹೇಳಿಕೊಡಲಾಗುತ್ತದೆ. ಹೌದು!

ಮಕ್ಕಳಿಗೆ ಬಾಲ್ಯದಿಂದಲೇ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ. ಪ್ರಾಥಮಿಕ ಶಿಕ್ಷಣದಲ್ಲೇ ಸಂಚಾರಿ ಸಂದೇಶಗಳನ್ನ ಮಕ್ಕಳ ಮುಂದಿಟ್ಟು ಸುಖಕರ ಪ್ರಯಾಣದ ಸಂದೇಶ ಸಾರಲು ಸಜ್ಜಾಗಿದೆ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ದೇಶದ ಮುಂದಿನ ಭವಿಷ್ಯ ನಿರ್ಧಾರ ಮಾಡೋದು ಇಂದಿನ ಈ ಪುಟ್ಟಾಣಿ ಮಕ್ಕಳೇ. ಹೀಗಾಗಿ ಶಿಕ್ಷಣದ ರೂಪದಲ್ಲೇ ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ರಾಜ್ಯ ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ.

ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತ ಪ್ರಕರಣಗಳು ಹೆಚ್ಚುತ್ತಿರೋ ಹಿನ್ನೆಲೆ ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸಂಚಾರ ವ್ಯವಸ್ಥೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಸಂಬಂಧ ಪೊಲೀಸ್​ ಇಲಾಖೆಯೇ ಪಠ್ಯಕ್ರಮ ಸಿದ್ಧಪಡಿಸಿ ವಿವಿಧ ತರಗತಿಯ ಪಠ್ಯಕ್ರಮದಲ್ಲಿ ಅಳವಡಿಸಲು ಸಿದ್ಧತೆ ನಡೆಸಿದೆ.

2, 4, 6, 7, 9ನೇ ತರಗತಿ ಮಕ್ಕಳಿಗೆ ಸಂಚಾರ ಸುರಕ್ಷತೆ ಪಠ್ಯ ಅವಳಿಸಲು ನಿರ್ಧರಿಸಲಾಗಿದೆ.. ಟ್ರಾಫಿಕ್ ಪೊಲೀಸರಿಂದ ಸಿದ್ಧಪಡಿಸಿರುವ ಪಠ್ಯವನ್ನ 2025-26ನೇ ಸಾಲಿನ ಪಠ್ಯ ಕ್ರಮದಲ್ಲಿ ಅಳವಡಿಸಲು ಶಿಕ್ಷಣೆ ಇಲಾಖೆ ಮುಂದಾಗಿದೆ. ಟ್ರಾಫಿಕ್ ಲೈಟ್, ಟ್ರಾವೆಲ್, ವೈಯಕ್ತಿಕ ಸುರಕ್ಷತೆ, ರೋಡ್ ಸೆಫ್ಟಿ, ‘ಸಡಕ್ ಕೀ ರಕ್ಷಾ ಸಬ್ ಕೀ ಸುರಾಕ್ಷಾ’ ಅಧ್ಯಯಗಳು ಅಳವಡಿಕೆಯಾಗಲಿವೆ. ಪಠ್ಯ ರಚನೆ ಅಥವಾ ಪರಿಷ್ಕರಣೆ ವೇಳೆ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!