2 ತಿಂಗಳಿನಿಂದ ಮಾತನಾಡದ ಗರ್ಲ್‌ಫ್ರೆಂಡ್‌ನ್ನು ಹೊಟೇಲ್‌ಗೆ ಕರೆಸಿ ಕೊಂದ ಟೆಕ್ಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಳೆದ ಎರಡು ತಿಂಗಳುಗಳಿಂದ ಮಾತನಾಡದೆ ಅಂತರ ಕಾಯ್ದುಕೊಂಡಿದ್ದರಿಂದ ರೊಚ್ಚಿಗೆದ್ದ ಟೆಕ್ಕಿಯೊಬ್ಬ ತನ್ನ ಪ್ರಿಯತಮೆಯನ್ನು ಹೊಟೇಲ್ ವೊಂದಕ್ಕೆ ಕರೆಯಿಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿ ನಡೆದಿದೆ.

ಹೋಟೆಲ್ ನ ಕೊಠಡಿಯೊಂದರಲ್ಲಿ 36 ವರ್ಷದ ಯುವತಿಯ ಕೊಲೆಯಾಗಿದೆ. ಘಟನೆ ನಡೆದ ಎರಡು ದಿನಗಳ ನಂತರ ಯುವತಿ ಹರಿಣಿ ಶವ ಪತ್ತೆಯಾಗಿದೆ. ಮೃತ ಹರಿಣಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ಯಶಸ್ ಜತೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಸದ್ಯ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು: ಓಯೋ ರೂಮ್​ನಲ್ಲಿ ಪ್ರಿಯತಮೆ ಬರ್ಬರ ಹತ್ಯೆ, 17 ಬಾರಿ ಇರಿದು ಕೊಂದ ಪ್ರಿಯಕರ25 ವರ್ಷದ ಆರೋಪಿ ಯಶಸ್, ಟೆಕ್ಕಿಯಾಗಿದ್ದಾನೆ. ಆತ ಶುಕ್ರವಾರ ರಾತ್ರಿ OYO ಹೋಟೆಲ್ ನಲ್ಲಿ ಹರಿಣಿ ಹತ್ಯೆ ಮಾಡಿದ್ದಾನೆ. ಇವರಿಬ್ಬರೂ ಕೆಂಗೇರಿ ನಿವಾಸಿಗಳು ಎಂಬುದು ತಿಳಿದುಬಂದಿದೆ.

ವರ್ಷಗಳಿಂದ ಇಬ್ಬರಿಗೂ ಪರಸ್ಪರ ಸ್ನೇಹ, ಸಲುಗೆ ಇತ್ತು. ಕಳೆದ ಎರಡು ತಿಂಗಳಿಂದ ಹರಿಣಿ ಮಾತನಾಡದೆ ಟೆಕ್ಕಿಯಿಂದ ದೂರ ಉಳಿದಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಟೆಕ್ಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿರುವುದಾಗಿ ದಕ್ಷಿಣ ಡಿಸಿಪಿ ಲೋಕೇಶ್ ಲೋಕೇಶ್ ಜಗಲಾಸರ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!