ಸಮುದ್ರದ ಮಧ್ಯೆ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಹಡಗಿನಿಂದ 18 ಸಿಬ್ಬಂದಿ ರಕ್ಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೇರಳದ ಕರಾವಳಿಯಲ್ಲಿ ಸೋಮವಾರ ಬೆಳಗ್ಗೆ ಸಿಂಗಾಪುರ ಧ್ವಜ ಹೊಂದಿರುವ ಕಂಟೈನರ್ ಹಡಗು ಎಂವಿ ವಾನ್ ಹೈ 503ರಲ್ಲಿ ಸ್ಫೋಟವೊಂದು ಸಂಭವಿಸಿರುವುದಾಗಿ ರಕ್ಷಣಾ ಪಡೆ ಪಿಆರ್‌ಒ ತಿಳಿಸಿದೆ.

ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಂಟೈನರ್ ಹಡಗಿನಿಂದ 18 ಸಿಬ್ಬಂದಿಯನ್ನು ಭಾರತೀಯ ನೌಕಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿರುವುದಾಗಿ ರಕ್ಷಣಾ ಮೂಲಗಳು ತಿಳಿಸಿವೆ.

ಬೆಳಗ್ಗೆ 10-30 ರ ಸುಮಾರಿನಲ್ಲಿ ಸ್ಫೋಟದ ಮೊದಲ ವರದಿಯನ್ನು ಮುಂಬೈನ ಕಡಲ ಕಾರ್ಯಾಚರಣೆ ಕೇಂದ್ರ ಕೊಚ್ಚಿಯಲ್ಲಿರುವ ಕಡಲ ಕಾರ್ಯಾಚರಣೆ ಕೇಂದ್ರಕ್ಕೆ ತಿಳಿಸಿದೆ. 270 ಮೀಟರ್ ಉದ್ದದ ಹಡಗು ಜೂನ್ 7 ರಂದು ಕೊಲಂಬೊದಿಂದ ಹೊರಟು ಮುಂಬೈಗೆ ತೆರಳುತ್ತಿತ್ತು, ಜೂನ್ 10 ರಂದು ಆಗಮಿಸುವ ನಿರೀಕ್ಷೆಯಿತ್ತು.

ಸಮುದ್ರ ಮಧ್ಯದಲ್ಲಿಎಂವಿ ವಾನ್ ಹೈ 503 ಹಡಗಿನಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ಜೂನ್ 9 ರಂದು ಬೆಳಗ್ಗೆ 10-30 ರ ಸುಮಾರಿನಲ್ಲಿ ಮುಂಬೈ ಕಡಲ ಕಾರ್ಯಾಚಾರಣೆ ಕೇಂದ್ರದಿಂದ ಮಾಹಿತಿ ಪಡೆಯಲಾಯಿತು. ಸಿಂಗಾಪುರ ಧ್ವಜ ಹೊಂದಿರುವ ಕಂಟೈನರ್ ಹಡಗು ಆಗಿದ್ದು, ಕೊಲೊಂಬೊದಿಂದ ಮುಂಬೈಗೆ ತೆರಳುತಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಭಾರತೀಯ ನೌಕ ಪಡೆ ಕೊಚ್ಚಿಯಲ್ಲಿ ನಿಲ್ಲಿಸಲು ನಿರ್ಧರಿಸಿದ್ದ ಐಎನ್‌ಎಸ್ ಸೂರತ್ ನ್ನು ನೆರವಿಗೆ ಕಳುಹಿಸಿದ್ದಾರೆ ಎಂದು ರಕ್ಷಣಾ ಪಡೆ PRO ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!