ಬೇಬಿಕಾರ್ನ್ ಪೆಪ್ಪರ್ ಫ್ರೈ ಒಂದು ಟೇಸ್ಟಿ ಹಾಗೂ ಸ್ಪೈಸಿ ಸ್ಟಾರ್ಟರ್ ಅಥವಾ ಸ್ನ್ಯಾಕ್ ಆಗಿದ್ದು, ಬೇಬಿಕಾರ್ನ್ ಪ್ರಿಯರಿಗಾಗಿ ಅತ್ಯುತ್ತಮ ಆಯ್ಕೆ. ಇದು ಚಹಾ ಜೊತೆಗೆ ಅಥವಾ ಊಟಕ್ಕೆ ಸೈಡ್ ಡಿಶ್ ಆಗಿಯೂ ಸವಿಯಬಹುದು.
ಬೇಕಾಗುವ ಸಾಮಗ್ರಿಗಳು:
ಬೇಬಿಕಾರ್ನ್ – 15 (ಉದ್ದವಾಗಿ ಕತ್ತರಿಸಿದ)
ಮೈದಾ – 2 ಟೇಬಲ್ ಸ್ಪೂನ್
ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್
ಜೀರಿಗೆ ಪುಡಿ – ½ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಕಾಳು ಮೆಣಸು ಪುಡಿ – 1 ಟೀ ಸ್ಪೂನ್
ಸೋಯಾ ಸಾಸ್ – 1 ಟೀ ಸ್ಪೂನ್
ಬೆಳ್ಳುಳ್ಳಿ, ಇಂಗು, ಹಸಿಮೆಣಸು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಬೇಕಾದಷ್ಟು
ಮಾಡುವ ವಿಧಾನ:
ಮೊದಲಿಗೆ ಬೇಬಿಕಾರ್ನ್ ಅನ್ನು ಉದ್ದಕ್ಕೆ ಕತ್ತರಿಸಿ ಉಪ್ಪು ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ. ಬೇಯಿಸಿದ ಬೇಬಿಕಾರ್ನ್‌ಗೆ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆ ಬಿಸಿ ಮಾಡಿ, ಈ ಮಿಶ್ರಣವನ್ನು ಡೀಪ್ ಫ್ರೈ ಮಾಡಿ.
ಮತ್ತೊಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಅದರಲ್ಲಿ ಬೆಳ್ಳುಳ್ಳಿ, ಹಸಿಮೆಣಸು, ಇಂಗು ಹಾಕಿ ಹುರಿಯಿರಿ. ಬಳಿಕ ಫ್ರೈ ಮಾಡಿದ ಬೇಬಿಕಾರ್ನ್ ಸೇರಿಸಿ, ಸೋಯಾ ಸಾಸ್, ಕಾಳುಮೆಣಸು ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.