ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಕೊಂಟಾ-ಎರ್ರಾಬೋರ್ ರಸ್ತೆಯ ದೋಂಡ್ರಾ ಬಳಿ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ, ಕೊಂಟಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ರಾವ್ ಗಿರ್ಪುಂಜೆ ಹುತಾತ್ಮರಾಗಿದ್ದಾರೆ.
ಜೂನ್ 10ರಂದು ಸಿಪಿಐ ಭಾರತ್ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಯಾವುದೇ ನಕ್ಸಲರ ಚಟುವಟಿಕೆಗಳನ್ನು ತಡೆಯಲು ಕಳುಹಿಸಲಾದ ಪಾದಚಾರಿ ಗಸ್ತು ತಂಡದ ಭಾಗವಾಗಿ ಎಎಸ್‌ಪಿ ಗಿರ್ಪುಂಜೆ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಇಡಿ ಸ್ಫೋಟದಿಂದ ಕೊಂಟಾ ಎಸ್‌ಡಿಪಿಒ ಮತ್ತು ಸ್ಥಳೀಯ ಠಾಣೆಯ ಉಸ್ತುವಾರಿ ಅಧಿಕಾರಿ ಕೂಡ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಐಜಿ ಬಸ್ತಾರ್ ಪಿ. ಸುಂದರರಾಜ್ ದೃಢಪಡಿಸಿದ್ದಾರೆ.