ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳಲಿದ್ದು, ಹಲವೆಡೆ ಯೆಲ್ಲೋ,ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಕೊಡಗು, ವಿಜಯನಗರದಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದೇ ಜಿಲ್ಲೆಗಳಲ್ಲಿ ಜೂನ್ 11ರಿಂದ ಮತ್ತಷ್ಟು ಮಳೆ ಹೆಚ್ಚಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಪರಶುರಾಂಪುರ, ಕುಂದಾಪುರ, ಕಕ್ಕೇರಿ, ಸಿಂಧನೂರು, ಧಾರವಾಡ, ಕೋಟಾ, ಮಸ್ಕಿ, ಇಂಡಿ, ಔರಾದ್, ವಿಜಯಪುರ, ಮಂಠಾಳ, ನಿಪ್ಪಾಣಿ, ಹುಮ್ನಾಬಾದ್, ಕೂಡಲಸಂಗಮ, ಆಗುಂಬೆ, ಭಾಗಮಂಡಲ, ರಾಯಲ್ಪಾಡು, ಹರಪನಹಳ್ಳಿ, ಮದ್ದೂರು, ಝಲ್ಕಿ, ಯಡ್ರಾಮಿ, ಕೆಂಭಾವಿ, ಲಕ್ಷ್ಮೇಶ್ವರ, ಮುನಿರಾಬಾದ್, ನಲ್ವತವಾಡ, ಮುಲ್ಕಿ, ಕ್ಯಾಸಲ್ರಾಕ್, ಕುಮಟಾ, ಬೀದರ್, ಕನಕಪುರ, ಬರಗೂರು, ಕೋಲಾರ, ಗಂಗಾವತಿ, ಲಿಂಗಸುಗೂರು, ಇಳಕಲ್, ಗುತ್ತಲ್, ಬಿಳಗಿ, ಮಾನ್ವಿ, ಕುರ್ಡಿ, ಗುತ್ತಲ್, ಸುಳ್ಯ, ಅಂಕೋಲಾ, ಗೋಕರ್ಣ, ಮೂಡುಬಿದಿರೆ, ಗೇರುಸೊಪ್ಪ, ಕಾರ್ಕಳದಲ್ಲಿ ಮಳೆಯಾಗಿದೆ.