SHOCKING | ಇಷ್ಟೊಂದು ದ್ವೇಷನಾ? ಏಕಾಏಕಿ ಮನೆಗೆ ನುಗ್ಗಿ ಮೂವರಿಗೆ ಗುಂಡೇಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹಳೆಯ ದ್ವೇಷದ ಹಿನ್ನೆಲೆ ಒಂದೇ ಕುಟುಂಬದ ಮೂವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಪರಿಣಾಮ ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಧನಂಜಯ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಇಬ್ಬರು ಮಹಿಳೆಯರು ಅವರ ಪತ್ನಿ ಮಹಾಲಕ್ಷ್ಮಿ ಮತ್ತು ಅವರ 19 ವರ್ಷದ ಮಗಳು ಎಂದು ಗುರುತಿಸಲಾಗಿದೆ.

ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಕಾಲಿಗೆ ಗುಂಡು ತಗುಲಿದ ಧನಂಜಯ್ ಮೆಹ್ತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಕುಟುಂಬವು ತಮ್ಮ ಮನೆಯ ಬಳಿ ಗುಂಪೊಂದು ಕುಡಿದು ಗಲಾಟೆ ಮಾಡುತ್ತಿತ್ತು, ಈ ವಿಚಾರವಾಗಿ ಮಹಾಲಕ್ಷ್ಮೀ ಎಂಬುವವರು ಜಗಳವಾಡುತ್ತಿದ್ದರು, ಬೇರೆಡೆ ಹೋಗುವಂತೆ ಕೇಳಿದ್ದರು, ದಿನನಿತ್ಯ ವಾಗ್ವಾದ ನಡೆಯುತ್ತಲೇ ಇತ್ತು.

ಇತ್ತೀಚೆಗೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದ ನಂತರ, ಧನಂಜಯ್ ಮೆಹ್ತಾ ಅವರ ಕುಟುಂಬದ ದೂರಿನ ಮೇರೆಗೆ ಪೊಲೀಸರು ಯುವಕರನ್ನು ಬಂಧಿಸಿದ್ದಾರೆ. ಗುಂಡಿನ ದಾಳಿ ಘಟನೆಯನ್ನು ಸೇಡಿನ ಕೃತ್ಯವೆಂದು ಪರಿಗಣಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಪ್ರತ್ಯಕ್ಷದರ್ಶಿಯಾಗಿದ್ದ ಧನಂಜಯ್, ಆಸ್ಪತ್ರೆಯಿಂದ ಹೇಳಿಕೆ ದಾಖಲಿಸುವಾಗ ಪೊಲೀಸರಿಗೆ ಇಡೀ ಘಟನೆಯನ್ನು ವಿವರಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!