Women | ಪೀರಿಯಡ್ಸ್ ಟೈಮ್ ನಲ್ಲಿ ಮಹಿಳೆಯರು ಹೆಚ್ಚು ಮಲವಿಸರ್ಜನೆ ಮಾಡುವುದು ಯಾಕೆ?

ಮುಟ್ಟಿನ ಸಮಯದಲ್ಲಿ ಮಹಿಳೆಯರು ಹಲವಾರು ದೈಹಿಕ ತೊಂದರೆಗಳನ್ನು ಅನುಭವಿಸುತ್ತಾರೆ. ಇದರಲ್ಲಿ ಹೆಚ್ಚಾಗಿ ಹೊಟ್ಟೆನೋವು, ಅತಿಯಾದ ರಕ್ತಸ್ರಾವ ಮಾತ್ರವಲ್ಲದೆ ಮಲವಿಸರ್ಜನೆ ಹೆಚ್ಚಾಗುವುದು ಕೂಡ ಸಾಮಾನ್ಯವಾಗಿದೆ. ಇತ್ತೀಚೆಗೆ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದ್ದು, ಇವುಗಳಿಗೆ ಕಾರಣಗಳೇನು ಎಂಬುದರ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ದೇಹ ನೀರು ಹೀರಿಕೊಳ್ಳಲು ತೊಂದರೆ
ಋತುಚಕ್ರದ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ಹಾರ್ಮೋನಲ್ ಬದಲಾವಣೆಗಳಿಂದಾಗಿ ದೇಹವು ನೀರನ್ನು ಸರಿಯಾಗಿ ಹೀರಿಕೊಳ್ಳಲು ಕಷ್ಟಪಡುತ್ತದೆ. ಈ ಕಾರಣದಿಂದ ಮಲವು ಮೃದುವಾಗಿ, ಕೆಲವೊಮ್ಮೆ ಅತಿಸಾರದ ಲಕ್ಷಣಗಳೂ ಕಾಣಿಸಬಹುದು.

Menstrual Cramp Home Remedies to Manage Pain

ಗರ್ಭಾಶಯದ ಸಂಕುಚಿತದ ಪರಿಣಾಮ ಕರುಳಿನ ಮೇಲೆ ಬೀಳುವುದು
ಋತುಚಕ್ರದ ಸಮಯದಲ್ಲಿ ಗರ್ಭಾಶಯವು ಸಂಕುಚಿಸಲು ಪ್ರೇರಿತವಾಗುತ್ತದೆ. ಈ ಸಂಕುಚನೆ ಸಮೀಪದಲ್ಲಿರುವ ಅಂಗವಾದ ಕರುಳಿನ ಮೇಲೆ ಸಹ ಪರಿಣಾಮ ಬೀರುತ್ತದೆ. ಇದರಿಂದಾಗಿ ಕರುಳಿನ ಚಲನಶೀಲತೆ ಹೆಚ್ಚಾಗಿ ಮಲವಿಸರ್ಜನೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

Irregular Periods: Causes, Implications, and Management

ಹಾರ್ಮೋನುಗಳ ಏರಿಳಿತದಿಂದ ಜೀರ್ಣಾಂಗದ ಮೇಲೆ ಪರಿಣಾಮ
ಈ ಸಮಯದಲ್ಲಿ ದೇಹದಲ್ಲಿನ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನುಗಳಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಜೀರ್ಣಾಂಗ ಈ ಬದಲಾವಣೆಗಳಿಗೆ ಅತಿ ಸಂವೇದನಾಶೀಲವಾಗಿರುವುದರಿಂದ, ಕೆಲವೊಮ್ಮೆ ಮಲಬದ್ಧತೆ, ಮತ್ತೊಂದೆಡೆ ಅತಿಸಾರದ ಸಮಸ್ಯೆ ಕಾಣಿಸಬಹುದು. (ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!