ದೀಪಿಕಾ ಪಡುಕೋಣೆ ಕೊಟ್ರು ಹೊಸ ಅಪ್ಡೇಟ್: ಶುರುವಾಗಲಿದೆ ‘ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ 8 ಗಂಟೆಗಳ ಕೆಲಸದ ಶಿಫ್ಟ್ ಕುರಿತ ಹೇಳಿಕೆಯಿಂದ ಸುದ್ದಿಯಲ್ಲಿದ್ದು, ಇದೀಗ ಹೊಸ ಪ್‌ಡೇಟ್‌‌ವೊಂದನ್ನು ಹಂಚಿಕೊಂಡಿದ್ದಾರೆ.. ಮಂಗಳವಾರ (ಜೂನ್ 10), ದೀಪಿಕಾ ಪಡುಕೋಣೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (PSB) ಎಂಬ ಹೆಸರಿನಲ್ಲಿ ಹೊಸ ಕ್ರೀಡಾ ಸಂಸ್ಥೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಈ ಕುರಿತು ದೀಪಿಕಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು “ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳಾಗಿ, ಈ ಕ್ರೀಡೆ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ವ್ಯಕ್ತಿತ್ವವನ್ನು ಹೇಗೆ ರೂಪಿಸುತ್ತದೆ ಎಂಬುದು ನನಗೆ ತಿಳಿದಿದೆ.” PSB ಸಂಸ್ಥೆಯ ಉದ್ದೇಶವೆಂದರೆ ಎಲ್ಲ ಹಂತದ ವ್ಯಕ್ತಿಗಳಿಗೂ ಬ್ಯಾಡ್ಮಿಂಟನ್ ಕ್ರೀಡೆಯ ಶಿಸ್ತು ಮತ್ತು ಸಂತೋಷವನ್ನು ತಲುಪಿಸಿ, ಆರೋಗ್ಯಕರ ಮತ್ತು ಕ್ರೀಡೆಯಿಂದ ಪ್ರೇರಿತ ಪೀಳಿಗೆಯನ್ನು ನಿರ್ಮಿಸುವುದು ಎಂದು ಬರೆದುಕೊಂಡಿದ್ದಾರೆ.

75 ಮೂಲಭೂತ ತರಬೇತಿ ಕೇಂದ್ರಗಳನ್ನು ಆರಂಭಿಸುತ್ತಿರುವ ಈ ಯೋಜನೆ, ಮೊದಲ ಹಂತದಲ್ಲಿ ಬೆಂಗಳೂರು, ಎನ್‌ಸಿಆರ್, ಮುಂಬೈ, ಚೆನ್ನೈ, ಜೈಪುರ, ಪುಣೆ, ಮೈಸೂರು ಸೇರಿದಂತೆ 18 ನಗರಗಳಲ್ಲಿ ಕಾರ್ಯನಿರ್ವಹಿಸಲಿದೆ. ವರ್ಷ ಅಂತ್ಯಕ್ಕೆ 100 ಕೇಂದ್ರಗಳ ಗುರಿ ಮತ್ತು ಮುಂದಿನ 3 ವರ್ಷಗಳಲ್ಲಿ 250 ಕೇಂದ್ರಗಳ ವಿಸ್ತರಣೆಯ ಯೋಜನೆ ಇದೆ.

PSB ಸಂಸ್ಥೆಯ ಸ್ಥಾಪಕಿಯಾಗಿ ದೀಪಿಕಾ ಪಡುಕೋಣೆ ಇದ್ದರೆ, ಅವರ ತಂದೆ ಹಾಗೂ ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಮಾರ್ಗದರ್ಶಕರಾಗಿ ಜೊತೆಗಿರಲಿದ್ದಾರೆ. ಬಾಲ್ಯದಲ್ಲೇ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ದೀಪಿಕಾ, ಈಗ ತಮ್ಮ ಅನುಭವವನ್ನು ಹೊಸ ಪೀಳಿಗೆಗೆ ಹಂಚಿಕೊಳ್ಳಲು ಮುಂದಾಗಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!