ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಮುಂದೆ ಬಸ್ ಥರ ಮೆಟ್ರೋ ಮೇಲೂ ಜಾಹೀರಾತು ನೋಡ್ತೀರಿ.. ಹೌದು ಆಯ್ದ ರೈಲುಗಳ ಹೊರಗಿನ ಭಾಗವನ್ನು ಜಾಹೀರಾತು ಪ್ರದರ್ಶನದಿಂದ ತುಂಬಿಸಲು ಬಿಎಮ್ಆರ್ಸಿಎಲ್ ನಿರ್ಧಾರ ಮಾಡಿದೆ. ಇತ್ತೀಚೆಗೆ ಹಲವಾರು ರೈಲುಗಳು ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತಿದೆ.
ಈ ಸಂಬಂಧ ಎರಡು ಖಾಸಗಿ ಸಂಸ್ಥೆಗಳೊಂದಿಗೆ BMRCL ದೀರ್ಘಾವಧಿಯ ಜಾಹೀರಾತು ಒಪ್ಪಂದಗಳಿಗೆ ಏಪ್ರಿಲ್ನಲ್ಲಿ ಸಹಿ ಹಾಕಿದೆ. ಮುದ್ರಾ ವೆಂಚರ್ಸ್ ನೇರಳೆ ಮಾರ್ಗದಲ್ಲಿ ಚಲಿಸುವ ರೈಲುಗಳ ಬಗ್ಗೆ ಜಾಹೀರಾತು ನೀಡಲು ಏಳು ವರ್ಷಗಳ ಒಪ್ಪಂದ ಪಡೆದುಕೊಂಡಿದೆ.
ಲೋಕೇಶ್ ಔಟ್ ಡೋರ್ ಜಾಹೀರಾತು ಕಂಪನಿ, ಹಸಿರು ಮಾರ್ಗದಲ್ಲಿ ರೈಲುಗಳಿಗೆ ಇದೇ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದೆ.ಪ್ರಯಾಣಿಕರ ದರ ಹೊರತಾಗಿ ಆದಾಯ ಹೆಚ್ಚಿಸುವ ವಿಸ್ತೃತ ಯೋಜನೆಯ ಭಾಗವಾಗಿ BMRCL ಮೆಟ್ರೋ ರೈಲುಗಳಲ್ಲಿ ಜಾಹೀರಾತುಗಳ ಮೂಲಕ ವಾರ್ಷಿಕವಾಗಿ ರೂ. 25 ಕೋಟಿ ಗಳಿಸುವ ಗುರಿ ಹೊಂದಿದೆ.ಕೆಲವರು ಈ ಕ್ರಮವನ್ನು ಸ್ವಾಗತಿಸಿದರೆ, ಮತ್ತೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.