ನಿಮ್ಮ ಮಲಗುವ ಕೋಣೆಯಲ್ಲಿ, ಶುದ್ಧ ಗಾಳಿ ಮತ್ತು ಶಾಂತ ಪರಿಸರ ಅತ್ಯಂತ ಅವಶ್ಯಕ. ಇಂತಹ ಪರಿಸರವನ್ನು ನಿರ್ಮಿಸಲು ಇನ್ಡೋರ್ ಗಾರ್ಡನಿಂಗ್ ಸಹಾಯಕವಾಗುತ್ತದೆ. ಕೆಲವು ಸಸ್ಯಗಳು ಗಾಳಿಯ ಶುದ್ಧೀಕರಣ, ಒತ್ತಡ ಕಡಿಮೆ ಮಾಡುವುದು, ಹಾಗೂ ಉತ್ತಮ ನಿದ್ರೆಗೂ ಸಹಾಯ ಮಾಡುತ್ತವೆ.
ಸ್ನೇಕ್ ಪ್ಲಾಂಟ್ (Snake Plant ):
ಸ್ನೇಕ್ ಪ್ಲಾಂಟ್ ರಾತ್ರಿ ಸಮಯದಲ್ಲೂ ಆಮ್ಲಜನಕವನ್ನು ಹೊರಬಿಡುವ ವಿಶೇಷತೆಗೆ ಹೆಸರುವಾಸಿಯಾಗಿದೆ. ಇದು ಗಾಳಿಯಲ್ಲಿನ ವಿಷಕಾರಿ ಅಂಶಗಳನ್ನು (ಟಾಲ್ಯೂನ್, ಫಾರ್ಮಾಲ್ಡಿಹೈಡ್) ಹೀರಿಕೊಂಡು ವಾತಾವರಣವನ್ನು ಶುದ್ಧಪಡಿಸುತ್ತದೆ. ನೀರು ಕಡಿಮೆ ಬೇಕಾಗುವದರಿಂದ ನಿರ್ವಹಣೆಯೂ ಸುಲಭ.
ಲಾವೆಂಡರ್ (Lavender):
ಲಾವೆಂಡರ್ ಗಿಡ ಸುಗಂಧವನ್ನು ಹರಡುತ್ತದೆ ಮತ್ತು ನಿದ್ರೆಗೆ ನೆರವಾಗುವ ಶಾಂತಿಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಇದರ ಪುಷ್ಪಗಳು ಆಕರ್ಷಕವಾಗಿದ್ದು, ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಬೆಳಕಿರುವ ಜಾಗದಲ್ಲಿ ಇಡುವುದು ಉತ್ತಮ.
ಅರೆಕಾ ಪಾಮ್ (Areca Palm):
ಈ ಗಿಡ ಮನೆಯ ಗಾಳಿಯನ್ನು ತಂಪು ಮಾಡುವಲ್ಲಿ ಸಹಾಯಮಾಡುತ್ತದೆ. ಇದು ಅತಿಯಾದ ಒರಟು ಗಾಳಿಯನ್ನು ತಡೆಯುವ ಮತ್ತು ತಾಜಾ ಗಾಳಿಯನ್ನು ಬಿಡುಗಡೆ ಮಾಡುವ ಗುಣ ಹೊಂದಿದೆ. ಮಲಗುವ ಕೋಣೆಯಲ್ಲಿ ಈ ಗಿಡ ಶಾಂತತೆಯ ಭಾವನೆ ಕೊಡುತ್ತದೆ.
ಪೀಸ್ ಲಿಲಿ (Peace Lily ):
ಪೀಸ್ ಲಿಲಿ ಗಿಡ ಗಾಳಿಯಲ್ಲಿನ ಬಾಕ್ಟೀರಿಯಾ ಮತ್ತು ಅಲರ್ಜಿಯನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರ ನಾಜೂಕಾದ ಹೂವುಗಳು ಕೋಣೆಗೆ ನೈಸರ್ಗಿಕ ಶೋಭೆ ನೀಡುತ್ತವೆ. ಅದು ಹೆಚ್ಚು ಬೆಳಕಿನ ಅವಶ್ಯಕತೆ ಇಲ್ಲದ ಕಾರಣ ಯಾವುದೇ ಕೋಣೆಯಲ್ಲಿ ಬೆಳೆಸಬಹುದು.
ಇಂತಹ ಸಸ್ಯಗಳನ್ನು ನಿಮ್ಮ ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುವುದರಿಂದ ನೀವು ಆರೋಗ್ಯಕರ ಗಾಳಿ, ಸುಸ್ಥಿರ ನಿದ್ರೆ ಮತ್ತು ಶಾಂತ ಮನಸ್ಸನ್ನು ಪಡೆಯಬಹುದು. ಇವುಗಳನ್ನು ಸರಿಯಾಗಿ ಪಾಲನೆ ಮಾಡಿದರೆ ನಿಮ್ಮ ಮನೆಯನ್ನು ಪ್ರಕೃತಿಯೊಡನೆ ಜೋಡಿಸಲು ಈ ಸಸ್ಯಗಳು ಸಹಾಯ ಮಾಡುತ್ತವೆ.