ಆರ್‌ಸಿಬಿ ಮಾರಾಟ ಸಿದ್ಧತೆ ಸುದ್ದಿ ಬೆನ್ನಲ್ಲೇ ಯುನೈಟೆಡ್ ಬ್ರಿವರೀಸ್ ಷೇರು ಬೆಲೆ ಹಠಾತ್ ಇಳಿಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಕತಾಳೀಯವೋ ಎಂಬಂತೆ ಆರ್‌ಸಿಬಿ ಮಾರಾಟ ಸಿದ್ಧತೆಯಾಗುತ್ತಿದೆ ಎಂಬ ಸುದ್ದಿ ವೈರಲ್ ಆಗುತ್ತಿರುವ ಬೆನ್ನಿಗೇ ಮಾಲೀಕ ಸಂಸ್ಥೆ ಡಿಯಾಜಿಯೋ ನ ಯುನೈಟೆಡ್ ಬ್ರಿವರೀಸ್ ಷೇರು ಬೆಲೆ ಹಠಾತ್ ಇಳಿಕೆ ಆಗಿದೆ.
ಮಂಗಳವಾರ ಯುನೈಟೆಡ್ ಬ್ರಿವರೀಸ್ ಷೇರುಬೆಲೆ ರೂ.23ರಷ್ಟು ಕುಸಿತವಾಗಿದೆ. ರೂ.2,087 ಇದ್ದ ಷೇರು ಬೆಲೆ ರೂ. 2,064ಕ್ಕೆ ಇಳಿದಿದೆ. ಮಧ್ಯಾಹ್ನ ಒಂದು ಹಂತದಲ್ಲಿ ಇದು 2,058 ರೂ. ದಾಖಲಿಸಿತ್ತು.
ಬ್ರಿಟನ್ ಮೂಲದ ಡಿಯಾಜಿಯೋ ಕಂಪನಿಯು ಯುನೈಟೆಡ್ ಬ್ರಿವರೀಸ್‌ನ ಮಾಲಕ ಸಂಸ್ಥೆಯಾಗಿದೆ. ಇದೇ ಸಂಸ್ಥೆ ಆರ್‌ಸಿಬಿಯಲ್ಲಿ ಬಂಡವಾಳ ತೊಡಗಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!