ವಿಟಮಿನ್ D ನಮ್ಮ ದೇಹದಲ್ಲಿ ಹಾರ್ಮೋನ್ ಸಮತೋಲನವನ್ನು ಕಾಪಾಡಲು, ಅಸ್ಥಿ ಮಜ್ಜೆಗಳನ್ನು ಬಲಗೊಳಿಸಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಗತ್ಯವಾದ ಪೋಷಕಾಂಶವಾಗಿದೆ. ಸಹಜವಾಗಿ ಸೂರ್ಯನ ಕಿರಣಗಳ ಮೂಲಕ ಈ ವಿಟಮಿನ್ ದೊರೆಯುತ್ತದೆ, ಆದರೆ ಕೆಲವೊಮ್ಮೆ ಆಹಾರದಿಂದಲೂ ಇದರ ಕೊರತೆಯನ್ನು ಪೂರೈಸಬಹುದು. ಹೀಗಾಗಿ ನಿತ್ಯ ಆಹಾರದಲ್ಲಿ ವಿಟಮಿನ್ D ನ್ನು ಹೊಂದಿರುವ ಕೆಲವು ನೈಸರ್ಗಿಕ ಆಹಾರಗಳನ್ನು ಸೇರಿಸಿಕೊಳ್ಳುವುದು ಆರೋಗ್ಯಕರ ಜೀವನಶೈಲಿಗೆ ಬಹುಮುಖ್ಯವಾಗಿದೆ.
ಮೀನು ಮತ್ತು ಮತ್ಸ್ಯ ತೈಲಗಳು(Fish & Fish Oils)
ಮೀನು, ವಿಶೇಷವಾಗಿ ಸಾಲ್ಮನ್, ಟ್ಯೂನಾ, ಮ್ಯಾಕ್ರೆಲ್ ಮತ್ತು ಕೊಡ್ ಲಿವರ್ ತೈಲವು ವಿಟಮಿನ್ D ಯ ಅತ್ಯುತ್ತಮ ನೈಸರ್ಗಿಕ ಮೂಲಗಳಾಗಿವೆ. ಈ ಆಹಾರಗಳು ದೇಹದಲ್ಲಿ ಕ್ಯಾಲ್ಸಿಯಂ ಶೋಷಣೆಗೆ ಸಹಾಯ ಮಾಡುತ್ತವೆ ಮತ್ತು ಅಸ್ಥಿಗಳ ಆರೋಗ್ಯವನ್ನು ಸುಧಾರಿಸುತ್ತವೆ.
ಮೊಟ್ಟೆಯ ಹಳದಿ ಭಾಗ (Egg Yolk)
ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ D ಅಂಶ ಹೆಚ್ಚು ಮಟ್ಟದಲ್ಲಿರುತ್ತದೆ. ಪ್ರತಿದಿನವೂ ಒಂದು ಅಥವಾ ಎರಡು ಮೊಟ್ಟೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ವಿಟಮಿನ್ D ಕೊರತೆಯನ್ನು ಕಡಿಮೆ ಮಾಡಬಹುದು.
ಹಾಲು ಮತ್ತು ಹಾಲು ಉತ್ಪನ್ನಗಳು(Milk and Dairy Products)
ಹಾಲು, ಬೆಣ್ಣೆ, ತುಪ್ಪ,ಮೊಸರು ಮೊದಲಾದ ಹಾಲಿನ ಉತ್ಪನ್ನಗಳು ವಿಟಮಿನ್ D ನಿಂದ ಸಮೃದ್ಧವಾಗಿರುತ್ತವೆ. ಹಾಲನ್ನು ದೈನಂದಿನ ಆಹಾರದಲ್ಲಿ ಬಳಸುವುದರಿಂದ, ದೇಹಕ್ಕೆ ಬೇಕಾದ ವಿಟಮಿನ್ D ಲಭಿಸುತ್ತದೆ.
ಧಾನ್ಯಗಳು (Fortified Cereals and Grains)
ಇತ್ತೀಚಿನ ದಿನಗಳಲ್ಲಿ ಹಲವಾರು ಬ್ರೆಡ್, ಧಾನ್ಯಗಳು ಮತ್ತು ಬ್ರೇಕ್‌ಫಾಸ್ಟ್ ಸೀರಿಯಲ್‌ಗಳನ್ನು ವಿಟಮಿನ್ D ನಿಂದ ಸಮೃದ್ಧಗೊಳಿಸಲಾಗುತ್ತದೆ. ಇವುಗಳನ್ನು ಬೆಳಗಿನ ಉಪಾಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆ.
ಮಶ್ರೂಮ್ಸ್ (Mushrooms)
ಮಶ್ರೂಮ್ಸ್‌ಗಳು ನೇರವಾಗಿ ಸೂರ್ಯಕಿರಣಗಳಿಗೆ ಬೆಳೆಯುವುದರಿಂದ ವಿಟಮಿನ್ D ಅನ್ನು ನೈಸರ್ಗಿಕವಾಗಿ ಉತ್ಪತ್ತಿ ಮಾಡುತ್ತವೆ. ವಿಶೇಷವಾಗಿ UV ಪ್ರಕ್ರಿಯೆಗೊಳಪಡಿಸಿರುವ ಮಶ್ರೂಮ್ಸ್‌ಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ D ಅಂಶವಿರುತ್ತದೆ. ಮಶ್ರೂಮ್‌ಗಳನ್ನು ಸೂಪ್ ಅಥವಾ ಪಲ್ಯ ರೂಪದಲ್ಲಿ ಸೇವಿಸಬಹುದು.
ವಿಟಮಿನ್ D ಕೊರತೆ ಬಹುಮಟ್ಟಿಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನೈಸರ್ಗಿಕ ಆಹಾರಗಳ ಮೂಲಕವೇ ವಿಟಮಿನ್ D ನ್ನು ಪಡೆಯುವುದು ಆರೋಗ್ಯಕರ ಆಯ್ಕೆಯಾಗಿದೆ. ಈ ಐದು ಆಹಾರಗಳನ್ನೂ ದಿನಚರಿಯಲ್ಲಿ ಸರಿಯಾದ ರೀತಿಯಲ್ಲಿ ಸೇರಿಸಿಕೊಳ್ಳುವುದರಿಂದ ನೀವು ಆರೋಗ್ಯದತ್ತ ಮೊದಲ ಹೆಜ್ಜೆ ಇಡಬಹುದು.