ಬದುಕಿನಲ್ಲಿ ಎಲ್ಲರೂ ಖುಷಿ ಬೇಕು ಅಂತ ಆಸೆ ಪಡ್ತಾರೆ. ಆದರೆ ನಾವು ಯಾವಾಗ ‘ಸಂತೋಷವಾಗಿದ್ದೇವೆ’ ಅಂತ ಖಂಡಿತವಾಗಿ ಹೇಳಬಹುದಾ? ಆ ಸಂತೋಷವನ್ನು ತೂಕಮಾಪಕದಲ್ಲಿ ಅಳೆಯಬಹುದಾ? ಗೊತ್ತಿಲ್ಲ. ಆದರೆ ಇತ್ತೀಚೆಗೆ ಮಾನಸಿಕ ಆರೋಗ್ಯ, ನವೋದ್ಯಮ, ಆರ್ಥಿಕ ನೀತಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಂತೋಷದ ಮಟ್ಟವನ್ನು ಅಳೆಯೋಕೆ ಹಲವಾರು ಪ್ರಯತ್ನಗಳು ನಡೆಯುತ್ತಿವೆ.
ತಜ್ಞರ ಅಭಿಪ್ರಾಯದ ಪ್ರಕಾರ, ಸಂತೋಷ ಅನ್ನೋದು ಒಂದು ಶುದ್ಧ ಭಾವನೆ. ಕೆಲವೊಂದು ಮಾನಸಿಕ ಮತ್ತು ನ್ಯೂರೋಲಾಜಿಕಲ್ ಸೂಚಕಗಳ ಮೂಲಕ ಅದನ್ನು ಅಳತೆ ಮಾಡಬಹುದಂತೆ. ಉದಾಹರಣೆಗೆ – ಡೊಪಮಿನ್, ಸೆರೋಟೋನಿನ್, ಎಂಡೋರ್ಫಿನ್ ಹಾರ್ಮೋನ್ಗಳ ಮಟ್ಟವನ್ನು ಪರೀಕ್ಷಿಸುವುದರಿಂದ ವ್ಯಕ್ತಿಯ ಒಳ್ಳೆಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಮಟ್ಟದಲ್ಲಿ ಹಲವಾರು ರಾಷ್ಟ್ರಗಳು “ಹ್ಯಾಪಿನೆಸ್ ಇಂಡೆಕ್ಸ್” ಅಥವಾ “ಸಂತೋಷ ಸೂಚ್ಯಾಂಕ” ರೂಪದಲ್ಲಿ ನಾಗರಿಕರ ಜೀವನದ ಖುಷಿಯನ್ನು ಅಳೆಯೋಕೆ ಪ್ರಯತ್ನ ಪಟ್ಟಿದ್ದಾರೆ. ಇದರ ಆಧಾರವಾಗಿ ಒಟ್ಟು ಆದಾಯ, ಜೀವನ ನಿರೀಕ್ಷೆ, ಸೋಶಿಯಲ್ ಸಪೋರ್ಟ್, ಭ್ರಷ್ಟಾಚಾರದ ಕೊರತೆ ಮೊದಲಾದ ಅಂಶಗಳನ್ನು ಲೆಕ್ಕಹಾಕಲಾಗುತ್ತದೆ.
ಸಂತೋಷವನ್ನು ಕೆಲವು ಅಂಶಗಳಲ್ಲಿ ಅಳೆಯಬಹುದು, ಬಿಟ್ಟರೆ ಅದು ಸಂಪೂರ್ಣ ಅಥವಾ ಶುದ್ಧ ಅಳತೆ ಅಲ್ಲ”. ವೈಜ್ಞಾನಿಕ ಪ್ರಗತಿ ಸಂತೋಷದ ಲಕ್ಷಣಗಳನ್ನು ಗುರುತಿಸಬಹುದು ಆದರೆ, ಪ್ರತಿಯೊಬ್ಬರ ಅನುಭವ ವಿಭಿನ್ನವಾಗಿರುವುದರಿಂದ, ಸಂತೋಷದ ನಿಖರ ಅಳತೆ ಹೇಳೋದು ಒಂದು ಸವಾಲಿನ ಕೆಲಸವೇ ಸರಿ.