Bigg Boss Season12 : ಪ್ರೋಗ್ರಾಮ್‌ ಹೋಸ್ಟ್‌ ಮಾಡ್ತೀನಿ, ಆದರೆ ಒಂದು ಕಂಡೀಷನ್‌! ಕಿಚ್ಚ ಸುದೀಪ ಹೇಳಿದ್ದೇನು?

ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯಗೊಂಡಿರುವ ಬೆನ್ನಲ್ಲೇ, 12ನೇ ಆವೃತ್ತಿಗೆ ಅಭಿಮಾನಿಗಳು ಉತ್ಸುಕರಾಗಿ ಕಾಯುತ್ತಿದ್ದಾರೆ. ಆದರೆ ಈ ನಿರೀಕ್ಷೆಯ ಮಧ್ಯೆ ಬಿಗ್ ಬಾಸ್ ವೀಕ್ಷಕರಿಗೆ ನಿರಾಶೆ ಮೂಡಿಸಿರುವ ವಿಚಾರವೆಂದರೆ, 11 ವರ್ಷಗಳಿಗೂ ಹೆಚ್ಚು ಕಾಲ ಬೆಸ್ಟ್ ನಿರೂಪಣೆಯಿಂದ ಮನರಂಜನೆ ನೀಡಿದ ಕಿಚ್ಚ ಸುದೀಪ್ ಮುಂದಿನ ಸೀಸನ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿರುವುದು.

ಈ ಘೋಷಣೆಯ ನಂತರ, ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಸೀಸನ್ 12 ಕುರಿತಾದ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಕೆಲವು ಸುದ್ದಿ ವರದಿಗಳ ಪ್ರಕಾರ, ಸುದೀಪ್ ಅವರು ಈ ಶೋವನ್ನು ಮುಂದುವರಿಸಲು ನಿರ್ಧರಿಸಿದ್ದು, ಕೆಲವು ನಿಬಂಧನೆಗಳನ್ನು ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ವರದಿಗಳ ಪ್ರಕಾರ ವಿವಾದಿತ ಸ್ಪರ್ಧಿಗಳಿಗೆ ಪ್ರಾಮುಖ್ಯತೆ ಕೊಡಬಾರದು, ಕನ್ನಡಿಗರಿಗೆ ಮೊದಲ ಆದ್ಯತೆ ಇರಲಿ, ಲೀಗಲ್ ಟೀಮ್ ಶಕ್ತಿಯಾಗಿ ಇರಲಿ, ಕನ್ನಡ ಭಾಷೆ ಮಾತ್ರವೇ ವೇದಿಕೆಯಲ್ಲಿ ಬಳಕೆಯಾಗಬೇಕು ಮತ್ತು ಬಿಗ್ ಬಾಸ್ ಮನೆ ಸಂಪೂರ್ಣ ವರ್ಣರಂಜಿತವಾಗಿರಬೇಕು ಎಂಬ ಹತ್ತು ಹಲವು ಷರತ್ತುಗಳನ್ನು ಕಿಚ್ಚ ಹಾಕಿದ್ದರಂತೆ.

ಆದರೆ, ಈ ಎಲ್ಲ ಮಾಹಿತಿ ಬಗ್ಗೆ ಬಿಗ್ ಬಾಸ್ ಕಾರ್ಯಕ್ರಮ ಅಥವಾ ಚಾನೆಲ್ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಹಾಗೆಯೇ, ಸುದೀಪ್ ಅವರೂ ಈ ಕುರಿತು ಮತ್ತೆ ಸ್ಪಷ್ಟನೆ ನೀಡಿಲ್ಲ. ಇದು ಸುದೀಪ್ ಬಿಗ್ ಬಾಸ್‌ಗೆ ವಿದಾಯವೋ ಅಥವಾ ತಾತ್ಕಾಲಿಕ ವಿರಾಮವೋ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸದ್ಯಕ್ಕೆ ಲಭ್ಯವಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!