ಹೊಸದಿಗಂತ ಕಲಬುರಗಿ:
ನಗರದ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಪರ್ ಮಾರ್ಕೆಟ್ ಹತ್ತಿರ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿತರನ್ನು ಬಂಧಿಸಿ, 3 ಲಕ್ಷ ರೂಪಾಯಿ ಮೌಲ್ಯದ 3 ಕೆ.ಜಿ 210 ಗ್ರಾಂ ವಶಪಡಿಸಿಕೊಳ್ಳಲಾಗಿದೆ.
ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬ್ರಹ್ಮಪುರ ಪೋಲಿಸರು, ಮಾರಾಟ ಮಾಡುತ್ತಿದ್ದ ಶ್ರೀಕಾಂತ್ ಸಿರ್ಸೆ (24), ರೋಷನ್ ಸಗರ (19),ದುರ್ಗೇಶ್ ಯಾದವ್ (19),ಸಿದ್ದರಾಮ ಪೂಜಾರಿ (19) ಎಂಬುವವರನ್ನು ಬಂಧಿಸಲಾಗಿದೆ.
ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಸದರಿ ಆರೋಪಿತರಿಂದ ೩ ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಆರ್ ಎಕ್ಸ್ 100 ಮೋಟಾರ್ ಸೈಕಲ್,4 ವಿವಿಧ ಕಂಪನಿಯ ಮೊಬೈಲ್ ಸೇರಿ ಒಟ್ಟು 3ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೋಲಿಸ್ ಆಯುಕ್ತರ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.