ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಆರ್‌ಎಸ್‌ನ ಬೃಂದಾವನ ಸಹ ಒಂದಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ನಮ್ಮ ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಪ್ರವಾಸಿಗರ ದಂಡು ಹರಿದು ಬರುತ್ತದೆ. ಇದನ್ನೇ ಅಡ್ವಾಂಟೇಜ್ ಮಾಡಿಕೊಂಡು ಪ್ರವಾಸಿಗರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಲಾಗುತ್ತಿದೆ.
ಕೆಆರ್‌ಎಸ್ ಡ್ಯಾಂ ಎದುರು ಬೃಂದಾವನಕ್ಕೆ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಾವೇರಿ ನದಿಗೆ ಅಡ್ಡಲಾಗಿ 7 ಕೋಟಿ ವೆಚ್ಚದಲ್ಲಿ 2003-04ರಲ್ಲಿ 500 ಮೀಟರ್ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು.
ಈ 7 ಕೋಟಿಯನ್ನು ಪಡೆಯುವ ಉದ್ದೇಶದಿಂದ ನಾಲ್ಕು ಚಕ್ರದ ವಾಹನಗಳಿಗೆ 50 ರೂ. ಹಾಗೂ 6 ಚಕ್ರದ ವಾಹನಗಳಿಗೆ 100 ರೂ.ಗಳನ್ನು ಟೋಲ್ ಮೂಲಕ ವಸೂಲಿ ಮಾಡಲಾಗುತ್ತಿತ್ತು. ಸದ್ಯ ಈ ಟೋಲ್ ಮೂಲಕ ಸಂಗ್ರಹ ಮಾಡಿದ ಹಣ ಸೇತುವೆ ನಿರ್ಮಾಣಕ್ಕೆ ಖರ್ಚಾದ ಹಣಕ್ಕಿಂತ ದುಪ್ಪಟ್ಟು ಹಣ ಸಂಗ್ರವಾಗಿದೆ.
ಟೋಲ್ ಮೂಲಕ ಈಗಾಗಲೇ ದುಪ್ಪಟ್ಟು ಹಣ ಸಂಗ್ರಹವಾದರೂ ಸಹ ಇದೀಗ ಕಳೆದ ಒಂದು ವಾರದಿಂದ ಇಲ್ಲಿನ ಟೋಲ್ ದರವನ್ನು ಒನ್ ಟು ಡಬಲ್ ಹೆಚ್ಚಿಸಲಾಗಿದೆ. 50 ರೂ. ಇದ್ದ ಟೋಲ್ ದರ 100, 50 ರೂ. ಇದ್ದ ಪಾರ್ಕಿಂಗ್ 100 ರೂ. ಎರಡು ಸೇರಿ 200 ರೂ. ಟೋಲ್‌ನಲ್ಲಿಯೇ ವಸೂಲಿ ಮಾಡಲಾಗುತ್ತದೆ.
ಒಂದು ವೇಳೆ ಬೃಂದಾವನಕ್ಕೆ ಹೋಗಲಿಲ್ಲ ಅಂದರೆ ಅಕ್ಕ-ಪಕ್ಕದ ಹಳ್ಳಿಯವರು ಸೇರಿದಂತೆ ಎಲ್ಲರೂ 100 ರೂ. ನೀಡಬೇಕಿದೆ. ಇದಲ್ಲದೇ ಬೃಂದಾವನ ಪ್ರವೇಶಕ್ಕೆ 50 ರೂ. ಇದ್ದ ಟಿಕೆಟ್ ದರವನ್ನು ಇದೀಗ 100 ರೂ. ಮಾಡಲಿದೆ. ಈ ದರ ಏರಿಕೆ ಪ್ರವಾಸಿಗರ ಆಕ್ರೋಶಕ್ಕೆ ಸಹ ಕಾರಣವಾಗುತ್ತಿದೆ.