ಸೌದಿಯಲ್ಲಿ ಮಧ್ಯಾಹ್ನ ನಂತರ ಕೆಲಸ ನಿಷೇಧ, ಏನಿದು ಹೊಸ ರೂಲ್ಸ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೌದಿ ಅರೇಬಿಯಾದಲ್ಲಿ ಮಧ್ಯಾಹ್ನ ನಂತರ ಕೆಲಸ ಮಾಡುವುದನ್ನು 3 ತಿಂಗಳ ಕಾಲ ನಿಷೇಧಿಸಲಾಗಿದೆ. ವಿಪರೀತ ಬಿಸಿಲಿನಿಂದ ಉಷ್ಣತೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವುದನ್ನು ಬ್ಯಾನ್ ಮಾಡಿದೆ.

ಈ ನಿಯಮವು ಭಾನುವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಖಾಸಗಿ ಕ್ಷೇತ್ರದ ಎಲ್ಲಾ ಕಂಪನಿಗಳು ಮತ್ತು ಸಂಸ್ಥೆಗಳಿಗಾಗಿ ಮೂರು ತಿಂಗಳ ಮಧ್ಯಾಹ್ನ ಔಟ್‌ಡೋರ್ ಕೆಲಸ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ನಿಯಮವನ್ನು ಘೋಷಿಸಿದೆ.

ರಾಷ್ಟ್ರೀಯ ಉದ್ಯೋಗ ಭದ್ರತೆ ಮತ್ತು ಆರೋಗ್ಯ ಪರಿಷತ್ತಿನ ಸಹಯೋಗದಲ್ಲಿ ಜಾರಿಗೊಂಡಿರುವ ಈ ನಿರ್ಧಾರವು, ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲು ನೇರವಾಗಿ ಬೀಳುವ ಸಮಯದಲ್ಲಿ ಹೊರಗಡೆ ಕೆಲಸ ಮಾಡುವಂತಿಲ್ಲ ಎಂದು ಆದೇಶಿಸಿದೆ. ಈ ನಿಷೇಧವು ಸೆಪ್ಟೆಂಬರ್ 15 ರವರೆಗೆ ಮುಂದುವರಿಯಲಿದೆ.

ಸಚಿವಾಲಯದ ಈ ನಿಯಮವು ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವ ಎನಿಸಿದೆ. ದಿನದ ಅತ್ಯಧಿಕ ಉಷ್ಣತೆಯ ಸಮಯದಲ್ಲಿ ನೇರ ಬಿಸಿಲಿನ ಅಡಿಯಲ್ಲಿ ಕೆಲಸ ಮಾಡುವುದನ್ನು ನಿಷೇಧಿಸುವ ಮೂಲಕ ಆರೋಗ್ಯ ಸಂಬಂಧಿತ ಅಪಾಯಗಳನ್ನು ತಪ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ಆರೋಗ್ಯಕರ ಮತ್ತು ಸುರಕ್ಷಿತ ಕೆಲಸದ ವಾತಾವರಣ ಜೊತೆಗೆ ಅಂತರಾಷ್ಟ್ರೀಯ ಉದ್ಯೋಗ ಭದ್ರತೆ ಮತ್ತು ಆರೋಗ್ಯ ಪ್ರಮಾಣಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!