ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಟ್ಟು 242 ಜನರನ್ನ ಹೊತ್ತು, ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಬೋಯಿಂಗ್ 787 ಫ್ಲೈಟ್ AI171, ಮೇಘನಿನಗರ ಎಂಬಲ್ಲಿ ಮೆಡಿಕಲ್ ಹಾಸ್ಟೆಲ್ ಕಟ್ಟಡದ ಮೇಲೆ ಅಪ್ಪಳಿಸಿ ಸ್ಫೋಟಗೊಂಡಿದೆ.
ಈ ದುರಂತ ನಡೆಯೋದಕ್ಕೂ ಮುನ್ನ, ಪೈಲಟ್ “ಮೇಡೇ, ಮೇಡೇ, ಮೇಡೇ” ಎಂದು ಮೂರು ಬಾರಿ ಕೂಗಿದ್ದಾರೆ. ಅಷ್ಟಕ್ಕೂ ಮೇಡೇ ಕರೆ ಅಂದರೇ ಏನರ್ಥ? ಯಾವ ಸಂದರ್ಭದಲ್ಲಿ ಈ ರೀತಿ ಕರೆ ಮಾಡಲಾಗುತ್ತೆ.
ಮೇಡೇ ಕರೆ ಅನ್ನೋದು.. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಒಂದು ಎಮರ್ಜೆನ್ಸಿ ಸಂಕೇತವಾಗಿದೆ. ಜೀವಕ್ಕೆ ಅಪಾಯಕಾರಿ ಅನಿಸಿದಾಗ ಬಳಸಲಾಗುತ್ತದೆ. ಇದರರ್ಥ ನನಗೆ ಸಹಾಯ ಮಾಡಿ ಎಂಬುದಾಗಿದೆ.
ಈ ಕರೆ ಎಮರ್ಜನ್ಸಿ ಚಿಹ್ನೆಯಾಗಿದ್ದು ಅಪಾಯದಲ್ಲಿರುವ ಸ್ಥಳ, ಅಲ್ಲಿನ ಎಮರ್ಜೆನ್ಸಿಯ ಪರಿಸ್ಥಿತಿ, ವಿಮಾನದಲ್ಲಿರುವ ಜನರ ಸಂಖ್ಯೆ ಮತ್ತು ಆ ಅಪಾಯದ ತೀವ್ರತೆ ಏನು ಎಂಬುದನ್ನ ತಿಳಿಸುತ್ತದೆ.
ತಾಂತ್ರಿಕ ದೋಷ ಕಂಡು ಬಂದ ಕೂಡಲೇ ಪೈಲಟ್ “ಮೇಡೇ, ಮೇಡೇ, ಮೇಡೇ” ಅಂತ ಕೂಗಿ ಅಪಾಯದ ಮುನ್ಸೂಚನೆಯನ್ನ ಕೊಟ್ಟಿದ್ದರು. ಆದರೆ ಆ ಕರೆಯ ನಂತರ ಫ್ಲೈಟ್ನಿಂದ ಯಾವುದೇ ಸಿಗ್ನಲ್ ಸಿಕ್ಕಿಲ್ಲ. ಅಷ್ಟರಲ್ಲಾಗಲೇ ನೆಲಕಪ್ಪಳಿಸಿ, ಘೋರ ದುರಂತ ನಡೆದುಬಿಟ್ಟಿದೆ.