ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋಟಾರ್ ಸೈಕಲ್ ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ರವೀಂದ್ರನಾಥ ಠಾಗೂರ್ ಪೂರ್ವಜರ ಮನೆ ಮೇಲೆ ಗುಂಪೊಂದು ದಾಳಿ ನಡೆಸಿದೆ.
ಜೂ.8 ರಂದು ವಸ್ತುಸಂಗ್ರಹಾಲಯದ ಸಿಬ್ಬಂದಿ ಹಾಗೂ ಸಂದರ್ಶಕ ಶಾ ನೇವಾಜ್ ನಡುವೆ ಮೋಟಾರ್ ಸೈಕಲ್ ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಇದರ ಸೇಡಿಗೆ ಗುಂಪೊಂದು ದಾಳಿ ನಡೆಸಿದ್ದು, ವಸ್ತುಸಂಗ್ರಹಾಲಯದ ಸಭಾಂಗಣ, ಕಿಟಕಿ ಗಾಜುಗಳು, ಬಾಗಿಲುಗಳು ಮತ್ತು ಪೀಠೋಪಕರಣಗಳನ್ನು ಧ್ವಂಸಗೊಳಿಸಿದೆ.
ಇದೀಗ ದಾಳಿ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, 50 ರಿಂದ 60 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.