ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಮಣಿನಗರ ನಿವಾಸಿ ಲಾರೆನ್ಸ್ ಡೇನಿಯಲ್ ಅಹಮದಾಬಾದ್ ವಿಮಾನ ಪತನದಲ್ಲಿ ಬದುಕಿನ ದುರಂತ ಅಂತ್ಯ ಕಂಡಿದ್ದಾರೆ.
ಲಾರೆನ್ಸ್ ಪ್ರಸ್ತುತ ಲಂಡನ್ನಲ್ಲಿ ಕೆಲಸ ಮಾಡುತ್ತಿದ್ದರು, ಇತ್ತೀಚೆಗೆ ತಂದೆ ತೀರಿಕೊಂಡ ಹಿನ್ನೆಲೆ ಮಣಿನಗರಕ್ಕೆ ಆಗಮಿಸಿದ್ದರು. ಅಪ್ಪನ ಅಂತ್ಯ ಸಂಸ್ಕಾರ ಮುಗಿಸಿ ಹೊರಟಿದ್ದ ಲಾರೆನ್ಸ್ ಡೇನಿಯಲ್ ತಮ್ಮ ಬದುಕಿನ ಯಾತ್ರೆಯನ್ನೇ ಮುಗಿಸಿದ್ದಾರೆ.
ಇತ್ತ ಗಂಡನ ಕಳೆದುಕೊಂಡ ದುಃಖ ಮಾಸುವ ಮುನ್ನವೇ ಮಗನನ್ನು ಕಳೆದುಕೊಂಡ ತಾಯಿ ಮತ್ತೆ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಸಾವಿಗೂ ಮುನ್ನ ಏರ್ಪೋರ್ಟ್ನಲ್ಲಿ ಮಗನೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವಷ್ಟೇ ತಾಯಿ ಬಳಿ ನೆನಪಾಗಿ ಉಳಿದಿದೆ.