Wound Care | ಗಾಯ ಆದ್ರೆ ಬೇಗ ವಾಸಿಯಾಗೋಕೆ ಏನು ಮಾಡ್ಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್

ಗಾಯ ಸಣ್ಣದಾಗಿರಲಿ ದೊಡ್ಡದಾಗಿರಲಿ ಬೇಗ ಗುಣವಾಗೋದು ಎಲ್ಲರಿಗು ಬೇಕಾದದ್ದು. ಆದ್ರೆ ಏನು ಆರೈಕೆ ಮಾಡದೆ ಗಾಯ ಗುಣವಾಗಬೇಕು ಅಂದ್ರೆ ಹೇಗೆ ಸಾಧ್ಯ. ಅದಕ್ಕೆ ನಾವು ಸರಿಯಾದ ಆಹಾರ ಕ್ರಮ, ಆರೈಕೆ, ಚಿಕಿತ್ಸೆ ಪಡೆದರೆ ಮಾತ್ರನೇ ಗುಣವಾಗೋದು. ಇವತ್ತು ನಾವು ಈ ಲೇಖನದಲ್ಲಿ ಗಾಯವನ್ನು ಬೇಗ ಗುಣಪಡಿಸಲು ಬೇಕಾಗುವ 5 ಟಿಪ್ಸ್ ಕೊಡತ್ತೇವೆ.

ಗಾಯವನ್ನು ಶುಚಿಯಾಗಿಡಿ:
ಗಾಯವಾದ ತಕ್ಷಣ ಮಣ್ಣು, ಧೂಳು ಅಥವಾ ಮೈಕ್ರೋಆರ್ಗ್ಯಾನಿಸಂನಿಂದ ಇನ್‌ಫೆಕ್ಷನ್ ಆಗದಂತೆ ತಡೆಯಬೇಕು. ಶುಚಿ ನೀರು ಅಥವಾ ಏಂಟಿಸೆಪ್ಟಿಕ್ ಲೋಷನ್ ಬಳಸಿ ಗಾಯದ ಭಾಗವನ್ನು ಸ್ವಚ್ಛಗೊಳಿಸಿ.

Wound Cleaning for First Aid | First Aid Online

ಬ್ಯಾಂಡೇಜ್ ಬಳಸಿ
ಗಾಯ ಮುಚ್ಚಿಕೊಂಡು ರಕ್ಷಿಸಲು ಬ್ಯಾಂಡೇಜ್ ಹಾಕಿ. ಇದರಿಂದ ಗಾಯಕ್ಕೆ ಸೋಂಕು ತಗುಲುವುದನ್ನು ತಡೆಯಬಹುದು. ಆದರೆ ಒಂದೇ ಬ್ಯಾಂಡೇಜ್ ಅನ್ನು ತುಂಬಾ ದಿನಗಳ ಕಾಲ ಇಟ್ಟುಕೊಳ್ಳಬಾರದು. ವೈದ್ಯರ ಸಲಹೆಯಂತೆ ಬದಲಾಯಿಸಿಕೊಳ್ಳುತ್ತಿರಬೇಕು.

How To Clean a Wound: Basic Wound Care

ಸೂಕ್ತ ಆಹಾರ ಸೇವಿಸಿ:
ಹೆಚ್ಚು ಪ್ರೋಟೀನ್, ವಿಟಮಿನ್ C, ವಿಟಮಿನ್ A, ಜಿಂಕ್ ಮತ್ತು ಐರನ್ ಅಂಶ ಇರುವ ಆಹಾರ (ಹುಳಿ ಹಣ್ಣು, ಹುರುಳಿಕಾಳುಗಳು, ಹಾಲು, ಕಡಲೆಕಾಯಿ, ಕೊತ್ತಂಬರಿ ಸೊಪ್ಪು) ಸೇವನೆ ಗಾಯ ಬೇಗನೆ ಗುಣವಾಗಲು ಸಹಾಯ ಮಾಡುತ್ತದೆ.

Eat Just Right: Build A Healthy Food Chart | Femina.in

ವಿಶ್ರಾಂತಿ ಪಡೆಯುವುದು ಬಹುಮುಖ್ಯ:
ದೊಡ್ಡ ಮಟ್ಟಿನ ಗಾಯವಾದಗ ಅಗತ್ಯವಾದಷ್ಟು ವಿಶ್ರಾಂತಿ ನೀಡುವುದು ಬಹಳ ಮುಖ್ಯ. ದೇಹಕ್ಕೆ ವಿಶ್ರತಿ ಸಿಕ್ಕರೆ ಮಾತ್ರ ದೇಹ ಗಾಯದಿಂದ ಬೇಗನೆ ಗುಣಮುಖವಾಗುತ್ತದೆ.

Rest injury Stock Photos, Royalty Free Rest injury Images | Depositphotos

ತಜ್ಞರ ಸಲಹೆ ಪಡೆದುಕೊಳ್ಳಿ:
ಗಾಯ ಗಂಭೀರವಾಗಿದ್ದರೆ ಅಥವಾ ಕೀವು, ಊತ, ಕಾಣಿಸಿಕೊಂಡರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಕೆಲವೊಮ್ಮೆ ಒಳಭಾಗದಲ್ಲಿ ಹೆಚ್ಚಿನ ಹಾನಿಯಾಗಿರಬಹುದು.

PATIENT PROBLEMS VS DOCTORS ADVICE - Kauvery Hospital

ಗಾಯವನ್ನು ನಿರ್ಲಕ್ಷಿಸದೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರೆ, ಅದು ಶೀಘ್ರ ಗುಣಗೊಳ್ಳಬಹುದು. ನೈರ್ಮಲ್ಯ, ಆಹಾರ, ವಿಶ್ರಾಂತಿ ಮತ್ತು ವೈದ್ಯಕೀಯ ಸಹಾಯ—ಇವುಗಳ ಸಮತೋಲನವೇ ಗಾಯ ಗುಣಮುಖವಾಗೋದಕ್ಕೆ ದಾರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!