February 4, 2026
Wednesday, February 4, 2026
spot_img

ಔಷಧಿಗಳಿಲ್ಲದ ಸರ್ಕಾರಿ ಆಸ್ಪತ್ರೆ: ಚಿಕಿತ್ಸೆ ಕೊಡೋದು ಹೇಗೆ ಅಂತಾರೆ ವೈದ್ಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಡವರ ಪಾಲಿನ “ಸಂಜೀವಿನಿ” ಎಂದೇ ನಂಬಲಾದ ಸರ್ಕಾರಿ ಆಸ್ಪತ್ರೆಗಳು ಇಂದು ವ್ಯವಸ್ಥೆಯ ಅವ್ಯವಸ್ಥೆಯಿಂದಾಗಿ ಸೊರಗುತ್ತಿವೆ. ಔಷಧಿಗಳ ತೀವ್ರ ಕೊರತೆಯಿಂದಾಗಿ ಬಡ ರೋಗಿಗಳು ದಿಕ್ಕುತೋಚದಂತಾಗಿದ್ದು, ಇಲಾಖೆಯ ಉದಾಸೀನ ಮನೋಭಾವದ ವಿರುದ್ಧ ಈಗ ಸ್ವತಃ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವೇ ಧ್ವನಿ ಎತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಆರೋಗ್ಯ ಸಚಿವರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ವೈದ್ಯಾಧಿಕಾರಿಗಳ ಸಂಘವು ಔಷಧಿ ಕೊರತೆಯ ಬಗ್ಗೆ ಬಹಿರಂಗ ಪ್ರಕಟಣೆ ಹೊರಡಿಸಿದೆ. “ಕಾಲಕಾಲಕ್ಕೆ ಸಮರ್ಪಕ ಔಷಧಿ ಪೂರೈಕೆಯಾಗದೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಅಸಾಧ್ಯವಾಗುತ್ತಿದೆ” ಎಂದು ಸಂಘವು ತನ್ನ ಬೇಸರ ವ್ಯಕ್ತಪಡಿಸಿದೆ.

ಇದನ್ನೂ ಓದಿ:

ಸರ್ಕಾರವು ಸ್ಥಳೀಯವಾಗಿ ಔಷಧಿ ಖರೀದಿಸಲು ಸೂಚಿಸುತ್ತಿದೆಯಾದರೂ, ಅನೇಕ ಆರೋಗ್ಯ ಸಂಸ್ಥೆಗಳಿಗೆ ಇನ್ನೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ವೈದ್ಯರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದ್ದು, ರೋಗಿಗಳಿಗೆ ಪ್ರಿಸ್ಕ್ರಿಪ್ಷನ್ ಬರೆದುಕೊಟ್ಟು ಹೊರಗಡೆ ಔಷಧಿ ಖರೀದಿಸಲು ಸೂಚಿಸುವ ಅನಿವಾರ್ಯತೆ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !