ಮೇಷ
ಮಾನಸಿಕ ಉದ್ವಿಗ್ನತೆ ಹೆಚ್ಚಬಹುದು. ಯಾವುದೋ ವಿಷಯ ಚಿಂತೆಗೆ ಕಾರಣವಾಗುತ್ತದೆ. ಶಾಂತ ಮನಸ್ಸಿನಿಂದ ಪರಿಸ್ಥಿತಿ ನಿಭಾಯಿಸಿ.
ವೃಷಭ
ವ್ಯವಹಾರದಲ್ಲಿ ತೊಡಕು ಸಂಭವ. ಕೆಲವರ ವರ್ತನೆ ಅಸಹನೆ ಹೆಚ್ಚಿಸಬಹುದು. ಆ ಬಗ್ಗೆ ತಲೆಕೆಡಿಸಿಕೊಳ್ಳದಿರಿ. ನಿಮ್ಮ ಕೆಲಸಕ್ಕಷ್ಟೆ ಗಮನ ಕೊಡಿ.
ಮಿಥುನ
ಕುಟುಂಬದ ಸಮಸ್ಯೆ ಸಣ್ಣದಾಗಿ ಕಂಡರೂ ದೀರ್ಘ ಎಳೆಯಬಹುದು. ಹೆಚ್ಚು ಚಿಂತೆಗೆ ಕಾರಣ ವಾದೀತು. ಬೇಗ ಪರಿಹರಿಸಿದಷ್ಟು ಕ್ಷೇಮ.
ಕಟಕ
ಸಮಸ್ಯೆಗಳು ಮುಗಿಯುತ್ತಿಲ್ಲ ಎಂಬ ಹತಾಶೆಯೆ? ಗ್ರಹಗತಿ ಹಾಗಿದೆ. ಸ್ವಲ್ಪಕಾಲ ಈ ಪರಿಸ್ಥಿತಿ ಇದ್ದರೂ ಬಳಿಕ ನಿರಾಳತೆ ಸಿಗಲಿದೆ.
ಸಿಂಹ
ಅನ್ಯರ ವ್ಯವಹಾರ ದಲ್ಲಿ ನೀವು ತಲೆ ಹಾಕಬೇಡಿ. ಅದರಿಂದ ನಿಮಗೇ ಪ್ರತಿಕೂಲ. ಆಪ್ತರ ಜತೆ ಭಿನ್ನಮತ ಉಂಟಾದೀತು.
ಕನ್ಯಾ
ಪ್ರಮುಖ ವಿಷಯದಲ್ಲಿ ಮೂಡಿದ್ದ ಗೊಂದಲ ಪರಿಹಾರ. ಕೌಟುಂಬಿಕ ಬಿಕ್ಕಟ್ಟು ತಿಳಿಯಾಗಲಿದೆ. ಬಂಧುಗಳಿಂದ ಸಹಕಾರ.
ತುಲಾ
ನಿಮಗೆ ಇಷ್ಟವಿಲ್ಲದ ವಿಚಾರದಿಂದ ದೂರ ಇರಿ. ಅನ್ಯರ ವ್ಯವಹಾರದಲ್ಲಿ ಪಾಲುದಾರರಾಗದಿರಿ. ಆಪ್ತ ಬಂಧುವಿನಿಂದ ಟೀಕೆ ಕೇಳಿಬಂದೀತು.
ವೃಶ್ಚಿಕ
ಅವಿರತ ಕೆಲಸ. ವಿರಾಮಕ್ಕೆ ಅವಕಾಶ ಸಿಗದು. ನಿಮ್ಮ ಕಾರ್ಯದ ಬಗ್ಗೆ ನಿಮಗೇ ಅತೃಪ್ತಿ. ಕುಟುಂಬಸ್ಥರ ಅಸಹಕಾರ ಎದುರಿಸುವಿರಿ.
ಧನು
ಸಣ್ಣ ವಿಷಯಕ್ಕೆ ಮನಸ್ಸು ಹಾಳು ಮಾಡಿಕೊಳ್ಳುವಿರಿ. ಕೆಲ ವಿಚಾರಗಳನ್ನು ಅದರಷ್ಟಕ್ಕೆ ಬಿಡಲು ಕಲಿಯಿರಿ. ಅಽಕ ಚಿಂತೆ ಮಾಡಬೇಡಿ.
ಮಕರ
ಒಂದರ ಮೇಲೆ ಇನ್ನೊಂದು ಸಮಸ್ಯೆ ಬಂದೆರಗುವುದು. ಹೊಸತೇನನ್ನೂ ಮಾಡದೆ ತುಸು ಕಾಲ ಸುಮ್ಮಗೆ ಕೂರುವುದೊಳಿತು.
ಕುಂಭ
ದೊಡ್ಡ ಕಾರ್ಯಕ್ಕೆ ಅಣಿಯಾಗುವಾಗ ಸರಿಯಾದ ಯೋಜನೆ ಇರಲಿ. ವಿರೋಧ ಲೆಕ್ಕಿಸದಿರಿ. ಕೊನೆಯಲ್ಲಿ ಎಲ್ಲ ಸರಿಯಾಗಲಿದೆ.
ಮೀನ
ಗ್ರಹಗತಿ ಪ್ರತಿಕೂಲ. ಮಾನಸಿಕ ನೆಮ್ಮದಿ ದೂರ. ಕೆಲಕಾಲ ಇಂತಹ ಚಿಂತೆ ಮುಂದುವರಿಯಲಿದೆ. ಸಹನೆಯಿಂದ ಇರಿ. ಬಳಿಕ ಸರಿಯಾಗುವುದು.