“ಅವನು ಎಲ್ಲಿಂದ ಎಲ್ಲಿಗೆ ಬಂದ ನೋಡಿ, ಅವನ ಯಶಸ್ಸು ಅದ್ಭುತ ! ಹೇಗೋ ನನಗಾದರೂ ಅಂಥ ಯಶಸ್ಸು ಸಿಗಬಾರದಿತ್ತಾ…” ಇದು ಯಾರಾದರೊಬ್ಬರನ್ನು ನೋಡಿ ನಾವು ಈ ಮಾತನ್ನು ಖಂಡಿತ ಹೇಳಿರುತ್ತೇವೆ.
ಆದ್ರೆ ಅವರು ಹೇಗೆ ಅಷ್ಟು ಯಶಸ್ವಿಯಾದ್ರು ಗೊತ್ತಾ? ಅದಕ್ಕೆ ಯಾವುದೇ ಮ್ಯಾಜಿಕ್ ಇಲ್ಲ. ಕೆಲವು ಮಹತ್ವದ ಗುಣಗಳನ್ನು ತಮ್ಮ ದಿನಚರಿಯಲ್ಲಿ ಬೆಳೆಸಿಕೊಂಡ್ರೆ ನಿಮಗೂ ಯಶಸ್ಸು ಕಷ್ಟವಲ್ಲ. ಈ ಐದು ಗುಣಗಳಲ್ಲಿ ಇಡೀ ರಹಸ್ಯ ಇದೆ! ಈ ಗುಣಗಳು ಕೇವಲ ಉದ್ಯೋಗದಲ್ಲಿ ಮುಂದುವರೆಯಲು ಮಾತ್ರವಲ್ಲ, ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಲು ಸಹ ಸಹಾಯ ಮಾಡುತ್ತೆ.
ಶಿಸ್ತಿನ ಮನೋಭಾವ (Discipline)
ಯಾವ ಕೆಲಸವನ್ನಾದರೂ ನಿಗದಿತ ಸಮಯಕ್ಕೆ ಮುಗಿಸಲು ಶಿಸ್ತುಪಾಲನೆ ಮಾಡುತ್ತಾರೆ. ಶಿಸ್ತಿನಿಂದ ಕೆಲಸ ಮಾಡಿದಾಗ ಹೆಚ್ಚಿನ ನಂಬಿಕೆ ಮತ್ತು ವಿಶ್ವಾಸವನ್ನು ಸಂಪಾದಿಸಬಹುದು.
ಸಮಯ ಪಾಲನೆ (Punctuality)
ಯಾವಾಗಲೂ ಸಮಯಕ್ಕೆ ಬರುತ್ತಾನೆ ಮತ್ತು ಕೆಲಸಗಳನ್ನು ಚೂರು ತಡವಾಗದಂತೆ ಪೂರ್ತಿಗೊಳಿಸುವುದು. ಸಮಯದ ಮೌಲ್ಯವನ್ನು ಅರ್ಥಮಾಡಿಕೊಂಡವರು ಮಾತ್ರ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಬಹುದು.
ಸಹಕಾರ ಮತ್ತು ತಂಡದ ಮನೋಭಾವ (Team Spirit)
ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿರುವುದು. ತಂಡದೊಂದಿಗೆ ಸೌಹಾರ್ದಯುತವಾಗಿ ಕೆಲಸ ಮಾಡಿದರೆ, ಸಂಸ್ಥೆಯ ಉನ್ನತಿಯಲ್ಲೂ ಪಾತ್ರವಹಿಸಬಹುದು.
ಹೊಸತು ಕಲಿಯುವ ಉತ್ಸಾಹ (Willingness to Learn)
ಸದಾ ಹೊಸದನ್ನು ಕಲಿಯಲು ಉತ್ಸುಕನಾಗಿರುವುದು. changing technology ಮತ್ತು ನವೀನತೆಗಳನ್ನು ಅಳವಡಿಸಿಕೊಳ್ಳುವುದು ಯಶಸ್ಸಿಗೆ ಮಾರ್ಗವಾಗುತ್ತದೆ.
ಸಮಸ್ಯೆ ಪರಿಹಾರ ಸಾಮರ್ಥ್ಯ (Problem Solving Ability)
ಯಾವುದೇ ಸಮಸ್ಯೆಯಾದರೂ ಶಾಂತಿಯುತವಾಗಿ ಯೋಚಿಸಿ ಪರಿಹಾರ ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿರುವುದು. ಇದರಿಂದ ಯಾವುದೇ ತಪ್ಪುಗಳು ಮರುಕಳಿಸದ ರೀತಿಯಲ್ಲಿ ಕಾರ್ಯಪಡೆದು, ನಾಯಕತ್ವ ಗುಣವನ್ನೂ ತೋರಿಸುವುದು.
ಈ ಗುಣಗಳನ್ನು ಹೊಂದಿರುವ ವ್ಯಕ್ತಿ, ಯಾವುದೇ ವೃತ್ತಿಯಲ್ಲಿ ಮುಂದುವರಿದು, ಯಶಸ್ಸನ್ನು ಖಚಿತವಾಗಿಯೂ ಸಾಧಿಸುತ್ತಾನೆ.