ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನದಂದು, ರಕ್ತದಾನದಂತಹ ಸರಳ ಕಾರ್ಯವು ಹೇಗೆ ಅನೇಕರ ಜೀವವನ್ನು ಬದಲಾಯಿಸುತ್ತದೆ ಎಂಬುದನ್ನು ನೆನಪಿಸುತ್ತದೆ. ರಕ್ತದಾನವೆಂದಾಗ ಸಾಮಾನ್ಯವಾಗಿ ಅಪಘಾತಗಳಿಗೆ ಒಳಗಾದವರು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಬೇಕಾಗುತ್ತದೆ ಎಂದು ನಮ್ಮ ಮನಸ್ಸಿಗೆ ಬರುತ್ತದೆ, ಆದರೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಇರುವ ರೋಗಿಗಳು – ವಿಶೇಷವಾಗಿ ಡಯಾಲಿಸಿಸ್ನಲ್ಲಿರುವವರು – ರಕ್ತ ವರ್ಗಾವಣೆಯಿಂದ ಪ್ರಯೋಜನ ಪಡೆಯುತ್ತಾರೆ, ಆದರೆ ಈ ಬಗ್ಗೆ ಅರಿವು ಸಾಮಾನ್ಯ ಜನರಲ್ಲಿ ಕಡಿಮೆ ಇದೆ.
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ, ನಮ್ಮ ನೆಫ್ರಾಲಜಿ ವಿಭಾಗವು ಮೂತ್ರಪಿಂಡದ ರೋಗಿಗಳಿಗೆ ರಕ್ತದಾನ ಎಷ್ಟು ನಿರ್ಣಾಯಕ ಎಂಬುದನ್ನುನಾವು ಪ್ರತಿದಿನ ಹತ್ತಿರದಿಂದ ನೋಡುತ್ತೇವೆ. ರಕ್ತಹೀನತೆ ನಿರ್ವಹಣೆಯಿಂದ ಹಿಡಿದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಸಿದ್ಧತೆವರೆಗೆ, ರಕ್ತದ ಬೆಂಬಲವು ಮೂತ್ರಪಿಂಡ ಆರೈಕೆಯಲ್ಲಿ ಪ್ರಮುಖ ಕೊಂಡಿಯಾಗಿದೆ.
ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಮತ್ತು ರಕ್ತಹೀನತೆ ನಡುವಿನ ಸಂಬಂಧ
ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಮೂತ್ರಪಿಂಡಗಳ ಎರಿಥ್ರೋಪೊಯೆಟಿನ್ (EPO) ಉತ್ಪಾದಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. EPO ಎನ್ನುವುದು ಕೆಂಪು ರಕ್ತ ಕಣಗಳನ್ನು ತಯಾರಿಸಲು ಮೂಳೆ ಮಜ್ಜೆಗೆ ಸಂಕೇತ ನೀಡುವ ಹಾರ್ಮೋನ್ ಆಗಿದೆ. ಇದರ ಪರಿಣಾಮವಾಗಿ, ಅನೇಕ CKD ರೋಗಿಗಳಲ್ಲಿ ರಕ್ತಹೀನತೆ ಉಂಟಾಗುತ್ತದೆ.
ಇತ್ತೀಚಿನ ದಿನಗಳಲ್ಲಿ, ಕಬ್ಬಿಣಾಂಶದ ಪೂರಕಗಳು (Iron Supplements) ಮತ್ತು ಎರಿಥ್ರೋಪೊಯೆಟಿನ್ ಇಂಜೆಕ್ಷನ್ ಲಭ್ಯವಿದೆ, ಕಿಡ್ನಿ ತೊಂದರೆ ಇರುವ ರೋಗಿಗಳಿಗೆ ರಕ್ತ ಉತ್ಪಾದನೆಗೆ ಇದು ಅನುಕೂಲವಾಗಿದೆ. ಆದರೂ ನಾವು ನೋಡುವ 5 ರಿಂದ 10% ರೋಗಿಗಳು ಈ ಚಿಕಿತ್ಸೆಗೆ ಸ್ಪಂದಿಸುವುದಿಲ್ಲ.
ಈ ವ್ಯಕ್ತಿಗಳು ಸುರಕ್ಷಿತ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು, ದೇಹದ ಆಯಾಸವನ್ನು ತಪ್ಪಿಸಲು ಮತ್ತು ಹೃದಯದ ದುರ್ಬಲತೆಯನ್ನು ತಡೆಯಲು ಆಗಾಗ್ಗೆ ರಕ್ತ ವರ್ಗಾವಣೆಯ ಮೇಲೆ ಅವಲಂಬಿತರಾಗಿರುತ್ತಾರೆ.
ಡಯಾಲಿಸಿಸ್ ರೋಗಿಗಳಿಗೆ ಏಕೆ ಆಗಾಗ್ಗೆ ರಕ್ತ ಬೇಕಾಗುತ್ತದೆ?
- ಹೆಮೋಡಯಾಲಿಸಿಸ್ಗೆ ಒಳಗಾಗುವ ರೋಗಿಗಳು ವಿಶೇಷವಾಗಿ ರಕ್ತದ ಕೊರತೆಗೆ ಒಳಗಾಗುತ್ತಾರೆ:
- ಡಯಾಲಿಸಿಸ್ ಫಿಲ್ಟರ್ಗಳು ಅಥವಾ ಕಾರ್ಯವಿಧಾನಗಳ ಸಮಯದಲ್ಲಿ ಆಗಾಗ್ಗೆ ರಕ್ತ ನಷ್ಟ ಉಂಟಾಗಬಹುದು.
- ಪೌಷ್ಟಿಕ ಆಹಾರದ ಕೊರತೆ ಅಥವಾ ದೇಹದಲ್ಲಿರುವ ನ್ಯೂನತಗಳಿಂದಾಗಿ ಹಿಮೋಗ್ಲೋಬಿನ್ ಮಟ್ಟ ಇಳಿಕೆಯಾಗಬಹುದು.
- ಈ ರೋಗಿಗಳಲ್ಲಿ ಜಠರಗರುಳಿನ ರಕ್ತಸ್ರಾವ ಹೆಚ್ಚಿನ ಅಪಾಯ ವಿರುತ್ತದೆ.
- ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಅಥವಾ ಚೇತರಿಕೆ ನಂತರ ಅವರಿಗೆ ರಕ್ತದ ಅವಶ್ಯಕತೆ ಬರಬಹುದು.
ನಿಮ್ಮ ರಕ್ತ ಹೇಗೆ ಸಹಾಯ ಮಾಡುತ್ತದೆ
- ದಾನ ಮಾಡಿದ ಪ್ರತಿ ಯುನಿಟ್ ರಕ್ತವು ಕಿಡ್ನಿರೋಗಿಗಳಿಗೆ (CKD) ಸಹಾಯ ಮಾಡುತ್ತದೆ:
- ರೋಗಿಯ ಶಕ್ತಿಯ ಮಟ್ಟವನ್ನು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.
- ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
- ಕಿಡ್ನಿ ಕಸಿಗೆ ಸಿದ್ಧತೆಗಾಗಿ ಸ್ಥಿರ ಹಿಮೋಗ್ಲೋಬಿನ್ ಬೇಕಾಗುತ್ತದೆ ನಿಮ್ಮ ರಕ್ತ ಅದನ್ನು ಖಚಿತಪಡಿಸುತ್ತದೆ.
- ತುರ್ತು ಪರಿಸ್ಥಿತಿಗಳಲ್ಲಿ ಜೀವಕ್ಕೆ ಅಪಾಯಕಾರಿ ರಕ್ತಸ್ರಾವವನ್ನು ನಿರ್ವಹಿಸಲು ಸಹಾಯ ಮಾಡುವುದು.
ನೀವು ಏನು ಮಾಡಬಹುದು?
ಈ ವಿಶ್ವ ರಕ್ತದಾನಿಗಳ ದಿನದಂದು, ನಿಯಮಿತ ದಾನಿಯಾಗಿ ನೋಂದಾಯಿಸಿಕೊಳ್ಳುವುದನ್ನು ಪರಿಗಣಿಸಿ. ನೀವು ಆಗಾಗ್ಗೆ ದಾನ ಮಾಡಲು ಸಾಧ್ಯವಾಗದಿದ್ದರೂ, ನಿಮ್ಮ ಒಂದು ಯುನಿಟ್ ರಕ್ತವು ಡಯಾಲಿಸಿಸ್ ರೋಗಿಯ ಆರೋಗ್ಯ ಸಮಸ್ಯೆಯನ್ನು ತಪ್ಪಿಸಲು ಅಥವಾ ಕಸಿಗೆ ಸಿದ್ಧರಾಗಲು ಸಹಾಯ ಮಾಡಬಹುದು.
ಯಾರು ರಕ್ತದಾನ ಮಾಡಬಹುದು?
- 18-65 ವರ್ಷ ವಯಸ್ಸಿನ ಆರೋಗ್ಯವಂತ ವಯಸ್ಕರು
- 50 ಕೆಜಿಗಿಂತ ಹೆಚ್ಚು ತೂಕ ಇರುವವರು
- ಹಿಮೋಗ್ಲೋಬಿನ್ ಮಟ್ಟ 12.5 g/dL ಜಾಸ್ತಿ ಇರುವವರು
- ಯಾವುದೇ ದೀರ್ಘಕಾಲದ ಸೋಂಕುಗಳು ಇಲ್ಲದಿರುವವರು ಅಥವಾ ಇತ್ತೀಚಿಗೆ ಶಸ್ತ್ರಚಿಕಿತ್ಸೆ ಒಳಗಾಗದಿರುವವರು
ಯಾರು ರಕ್ತದಾನ ಮಾಡಬಾರದು?
- ಗರ್ಭಿಣಿಯರು ಅಥವಾ ಹಾಲುಣಿಸುವ ಮಹಿಳೆಯರು
- ರಕ್ತಹೀನತೆ ಅಥವಾ ಇತ್ತೀಚಿನ ಅನಾರೋಗ್ಯದಿಂದ ಬಳಲುತ್ತಿರುವವರು
- ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು (ನಿಮ್ಮ ವೈದ್ಯರ ಸಲಹೆಯಂತೆ)
ಡಾ. ರವಿ. ಕೆ. ಆರ್
ಹಿರಿಯ ಮೂತ್ರಪಿಂಡ ಶಾಸ್ತ್ರಜ್ಞ
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶಿವಮೊಗ್ಗ