ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂಜಿನ್ನಲ್ಲಿ ತಾಂತ್ರಿಕ ದೋಷ ಉಂಟಾಗಿ ಅಹಮದಾಬಾದ್ನ ವಿಮಾನ ನಿಲ್ದಾಣದ ಬಳಿಯ ಮೇಘಾನಿ ಜನವಸತಿ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ ಒಟ್ಟು 274 ಮಂದಿ ಮೃತಪಟ್ಟಿದ್ದಾರೆ.
100 ಕೋಟಿ ಪ್ರಯಾಣಿಕರನ್ನು ಸೇಫ್ ಲ್ಯಾಂಡ್ ಮಾಡಿ ಬ್ರ್ಯಾಂಡ್ ಸೃಷ್ಟಿಸಿದ್ದ ಏರ್ ಲೈನ್ಸ್ನಲ್ಲಿ ಏನು ತಾಂತ್ರಿಕದೋಷ ಉಂಟಾಯಿತು ಎಂಬ ಕುರಿತು ತನಿಖೆ ಆರಂಭಗೊಂಅಡಿದೆ.
ಸುರಕ್ಷತೆ, ದಕ್ಷತೆ, ಆರಾಮದಾಯಕ ಬೋಯಿಂಗ್ 787 ವಿಮಾನಕ್ಕೆ ಏನಾಯಿತು? ಸೇಫ್ ಲ್ಯಾಂಡ್ಗೆ ಹೆಸರುವಾಸಿಯಾಗಿದ್ದ ವಿಮಾನ ಪತನ ಆಗಿದ್ದು ಹೇಗೆ ಎಂಬ ಕುರಿತು ತನಿಖೆ ತೀವ್ರಗೊಂಡಿದೆ. ವಿಮಾನ ಪತನಕ್ಕೆ ಕಾರಣ ಏನು ಎಂಬ ಕುರಿತು ಐದು ತಂಡಗಳು ತನಿಖೆ ಆರಂಭಿಸಿವೆ.
ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎಎಐಬಿ ದೇಶದಲ್ಲಿ ನಡೆಯುವ ವಿಮಾನ ದುರಂತಗಳ ಅಧಿಕೃತ ತನಿಖಾ ಸಂಸ್ಥೆಯಾಗಿದೆ.