ಅಬ್ಬಾ! ಖಲಿಯ ಹೊಡೆತಕ್ಕೆ WWE ರಿಂಗ್‌ನಲ್ಲಿ ಸತ್ತೇ ಹೋದ ಕುಸ್ತಿಪಟು

ಭಾರತದ ಹೆಮ್ಮೆಪಡುವ WWE ರೆಸ್ಲರ್ ದಿ ಗ್ರೇಟ್ ಖಲಿ, ತಮ್ಮ ಭಾರೀ ಶಕ್ತಿಯಿಂದ ಜಾಗತಿಕ ಕುಸ್ತಿ ಕ್ಷೇತ್ರದಲ್ಲಿ ಹೆಸರಾಗಿದ್ದಾರೆ. ಆದರೆ ಈ ಶಕ್ತಿಯೇ ಒಂದು ಕಾಲದಲ್ಲಿ ತಮ್ಮ ಎದುರಾಳಿಯ ಸಾವಿಗೆ ಕಾರಣವಾಯಿತು ಎಂಬ ಅಘಾತಕಾರಿ ವಿಷಯವೊಂದು ಸೋಶಿಯಲ್ ಮೀಡಿಯಾ ದಲ್ಲಿ ಇತ್ತೀಚಿಗೆ ವೈರಲ್ ಆಗುತ್ತಿದೆ.

ಈ ಘಟನೆ 2001ರಲ್ಲೇ ನಡೆದಿದ್ದು, WWEಗೆ ಸೇರುವ ಕನಸು ಕಂಡಿದ್ದ ಬ್ರಿಯಾನ್ ಒಂಗ್, ಖಲಿ ಜೊತೆಯಲ್ಲಿ ತರಬೇತಿ ಪಡೆಯುತ್ತಿದ್ದರು. ತರಬೇತಿ ವೇಳೆ ಖಲಿ, ಒಂಗ್ ಅವರನ್ನು ಎರಡು ಬಾರಿ ಎತ್ತರಕ್ಕೆ ಎತ್ತಿ ತಿರುಗಿಸಿ ಬಿಟ್ಟರು. ಇದರ ಪರಿಣಾಮವಾಗಿ ಒಂಗ್ ಅವರ ತಲೆ ನೇರವಾಗಿ ಮ್ಯಾಟ್ ಮೇಲೆ ಬಿದ್ದು ತಕ್ಷಣವೇ ಪ್ರಜ್ಞೆ ತಪ್ಪಿದ್ದರು. ಒಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಈ ಘಟನೆ ಖಲಿಗೆ ಭಾರೀ ಆಘಾತ ತಂದಿತು. ನಂತರ WWE ಖಲಿಯ ಒಪ್ಪಂದವನ್ನು ಹಿಂತೆಗೆದುಕೊಂಡಿತು. ತನಿಖೆಯಲ್ಲಿ ಇದು ಅಪಘಾತ ಎಂದು ಖಚಿತಗೊಂಡರೂ, ನ್ಯಾಯಾಲಯವು ಖಲಿಗೆ 13 ಲಕ್ಷ ದಂಡ ವಿಧಿಸಿತು. ಈ ಸಂದರ್ಭದಲ್ಲಿ ಖಲಿ ಕೆಲ ಸಮಯ ಕುಸ್ತಿಯಿಂದ ದೂರವಿದ್ದರು ಹಾಗೂ ಖಿನ್ನತೆಗೂ ಒಳಗಾಗಿದ್ದರು.

ಇದೀಗ ಪಂಜಾಬ್‌ನ ಜಲಂಧರ್‌ನಲ್ಲಿ ತಮ್ಮದೇ ಆದ ರೆಸ್ಲಿಂಗ್ ಸಂಸ್ಥೆ ನಡೆಸುತ್ತಿರುವ ಖಲಿ, ಅದೆ ಶಕ್ತಿಯಿಂದ ಹೊಸ ಪೀಳಿಗೆ ಕುಸ್ತಿಪಟುಗಳನ್ನು ತರಬೇತಿ ನೀಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!