February 4, 2026
Wednesday, February 4, 2026
spot_img

ಈ ಸಲ ಕಪ್ ನಮ್ದೋ ಇಲ್ವೋ ಗೊತ್ತಿಲ್ಲ, ಆದ್ರೆ ‘ಮಾಲೀಕ’ ಮಾತ್ರ ಹೊಸಬ್ರು! RCB ಅಧಿಪತಿ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಇತಿಹಾಸದ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಮಾರಾಟದ ಹಂತದಲ್ಲಿದೆ. ಪ್ರಸ್ತುತ ಮಾಲೀಕತ್ವ ಹೊಂದಿರುವ ಡಿಯಾಜಿಯೋ ಕಂಪೆನಿಯು ಫ್ರಾಂಚೈಸಿಯನ್ನು ಮಾರಾಟ ಮಾಡಲು ಅಧಿಕೃತವಾಗಿ ಚಾಲನೆ ನೀಡಿದ್ದು, ಇದರ ಮೌಲ್ಯ ಕೇಳಿ ಇಡೀ ಕ್ರಿಕೆಟ್ ಜಗತ್ತು ದಂಗಾಗಿದೆ.

ಸ್ಪೋರ್ಟಿಕೋ ವರದಿಯ ಪ್ರಕಾರ, RCB ತಂಡದ ಬ್ರ್ಯಾಂಡ್ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ (ಅಂದಾಜು 18,000 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಬಿಡ್ಡಿಂಗ್ ಪ್ರಕ್ರಿಯೆಯು ಇದೇ ಮೊತ್ತದಿಂದ ಆರಂಭವಾಗಲಿದ್ದು, ಅಂತಿಮವಾಗಿ ಇದು ಇನ್ನೂ ಹೆಚ್ಚಿನ ಬೆಲೆಗೆ ಮಾರಾಟವಾಗುವ ಸಾಧ್ಯತೆಯಿದೆ.

ಈಗಾಗಲೇ ಭಾರತದ ದಿಗ್ಗಜ ಉದ್ಯಮಿಗಳು ಈ ‘ರಾಯಲ್’ ತಂಡವನ್ನು ತಮ್ಮದಾಗಿಸಿಕೊಳ್ಳಲು ಸಜ್ಜಾಗಿದ್ದಾರೆ:

ಐಪಿಎಲ್‌ಗೆ ಪ್ರವೇಶಿಸಲು ಕಾತರದಿಂದಿರುವ ಗೌತಮ್ ಅದಾನಿ ತಂಡ ಬಿಡ್ಡಿಂಗ್‌ನಲ್ಲಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್‌ನ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ಆರ್​ಸಿಬಿಯನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಮೂಲದ ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಮಣಿಪಾಲ್ ಗ್ರೂಪ್‌ನ ರಂಜನ್ ಪೈ ಜೋಡಿಯಾಗಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ:

ಸೀರಮ್ ಇನ್ಸ್ಟಿಟ್ಯೂಟ್‌ನ ಸಿಇಒ ಕೂಡ ಈ ರೇಸ್‌ನಲ್ಲಿದ್ದಾರೆ. ವಿದೇಶಿ ಕಂಪೆನಿಗಳು ಕೂಡ ಡಿಯಾಜಿಯೋ ಜೊತೆ ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ.

ಒಂದು ವೇಳೆ ಈ ಡೀಲ್ ಕುದುರಿದರೆ, ಐಪಿಎಲ್ ಇತಿಹಾಸದಲ್ಲೇ ಇದು ಅತ್ಯಂತ ದುಬಾರಿ ಫ್ರಾಂಚೈಸಿ ಮಾರಾಟ ಎನಿಸಿಕೊಳ್ಳಲಿದೆ. ಮೈದಾನದಲ್ಲಿ ಟ್ರೋಫಿಗಾಗಿ ಹೋರಾಡುವ ತಂಡ, ಈಗ ಮಾರುಕಟ್ಟೆಯಲ್ಲಿ ಯಾವ ಬೆಲೆಗೆ ಮಾರಾಟವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !