ಮೇಷ
ಹೊಸತನಕ್ಕೆ ತುಡಿಯುವಿರಿ. ಹಳೆಯ ಕೆಲವು ವಿಷಯ ಬದಿಗೆ ಸರಿಸುವಿರಿ. ಮನೆಮಂದಿ ಜತೆ ಹರ್ಷೋಲ್ಲಾಸ.
ವೃಷಭ
ಶುಭಪ್ರದ ದಿನ. ಹಳೆ ಸಮಸ್ಯೆ ಪರಿಹಾರ. ವೃತ್ತಿಯಲ್ಲಿ ಹೊಸ ಭರವಸೆ. ಬಂಧುಮಿತ್ರರ ಸಮ್ಮಿಲನ. ಪ್ರೀತಿಯ ವಿಷಯದಲ್ಲಿ ಬೆಳವಣಿಗೆ.
ಮಿಥುನ
ಮನೆಯಲ್ಲಿ ನಲಿವಿನ ವಾತಾವರಣ. ಯಾವುದಾದರೂ ಸಣ್ಣ ವಿಷಯ ಸಂತೋಷ ಹಾಳು ಮಾಡಲು ಅವಕಾಶ ಕೊಡಬೇಡಿ.
ಕಟಕ
ಹದಗೆಟ್ಟ ಸಂಬಂಧ ಸುಧಾರಿಸಲು ಆದ್ಯತೆ ಕೊಡಿ. ಮನೆಮಂದಿಯ ಸಹಕಾರ ಸಿಗಲಿದೆ. ಖರ್ಚು ಹೆಚ್ಚುವುದು. ಖರೀದಿ ಕಡಿಮೆ ಮಾಡಿ.
ಸಿಂಹ
ಗಂಭೀರವೆಂದು ಭಾವಿಸಿದ ವಿಷಯ ನೀವು ತಿಳಿದಷ್ಟು ಗಂಭೀರವಲ್ಲ ಎಂಬ ಅರಿವು ಆಗಲಿದೆ. ಸುಲಭದಲ್ಲೆ ಎಲ್ಲವೂ ಇತ್ಯರ್ಥ ಕಾಣಲಿದೆ.
ಕನ್ಯಾ
ಸಾಂಸಾರಿಕ ಸಮಸ್ಯೆ ಇಂದು ನಿವಾರಣೆ. ಹೊಸ ಬಿಕ್ಕಟ್ಟಿಗೆ ಅವಕಾಶ ಕೊಡಬೇಡಿ. ಆರ್ಥಿಕ ಉನ್ನತಿ ಸಂತೋಷ ತರಲಿದೆ. ಬಂಧು ಭೇಟಿ.
ತುಲಾ
ಹೊಸ ವ್ಯವಹಾರಕ್ಕೆ ಕಾಲ ಪಕ್ವವಾಗಿದೆ. ಹೆಚ್ಚಿನ ಅಡ್ಡಿ. ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ. ಕೌಟುಂಬಿಕ ಬಿಕ್ಕಟ್ಟು ನಿವಾರಣೆ.
ವೃಶ್ಚಿಕ
ಎಲ್ಲರ ಜತೆ ಕೂಡಿ ಕಳೆಯುವ ಅವಕಾಶ. ಆದರೆ ದುಡುಕಿನ ವರ್ತನೆ ತೋರದಿರಿ. ನೆಮ್ಮದಿ ಹಾಳಾದೀತು. ಹೊಂದಾಣಿಕೆ ಮುಖ್ಯ.
ಧನು
ಭಾವನಾತ್ಮಕ ಪ್ರಸಂಗ ಎದುರಿಸುವಿರಿ. ಆಪ್ತರನ್ನು ಭೇಟಿಯಾಗುವ ಅವಕಾಶ. ಕಹಿಮಾತು ಆಡದಿರಿ. ಇತರರ ಭಾವನೆಗೆ ನೋವುಂಟು ಮಾಡದಿರಿ.
ಮಕರ
ಹೊಸ ವ್ಯವಹಾರದ ಯೋಜನೆ ಹಾಕಿದ್ದರೆ ಒಳಿತು ಕಾದಿದೆ. ಹಿಂಜರಿಕೆ ಬೇಡ. ಕೌಟುಂಬಿಕ ವಿರಸ ತಣ್ಣಗಾಗಿಸಲು ಹೆಚ್ಚು ಗಮನ ಕೊಡಿ.
ಕುಂಭ
ಕಾಡುತ್ತಿದ್ದ ಸಮಸ್ಯೆ ಪರಿಹಾರ ಕಾಣಲಿದೆ. ಸಾಂಸಾರಿಕ ವ್ಯವಹಾರದಲ್ಲಿ ಹೆಚ್ಚು ವಿವೇಕ ಪ್ರದರ್ಶಿಸಿ. ದುಡುಕಿನ ಮಾತು ಸಂಬಂಧ ಕೆಡಿಸಬಹುದು.
ಮೀನ
ಸಮಸ್ಯೆ ಮರೆತು ಈ ದಿನ ಕಳೆಯುವುದು ನಿಮ್ಮ ಉದ್ದೇಶವಾಗಿರಲಿ. ಸಣ್ಣ ವಿಷಯದಲ್ಲೂ ಸಂತೋಷ ಕಾಣಿರಿ. ಕೌಟುಂಬಿಕ ಮನಸ್ತಾಪ ತಣಿಸಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ