Good or Bad | ಮಾವಿನ ಹಣ್ಣು – ಮೊಸರು ಇವೆರಡು ಬೆಸ್ಟ್ ಕಾಂಬಿನೇಷನಾ? ತಿನ್ನಬಹುದಾ? ತಿನ್ನಬಾರ್ದ?

ಬೇಸಿಗೆ ಬಂದರೆ ಮಾವಿನ ಹಣ್ಣು ಹಚ್ಚಾಗಿ ತಿನ್ಬೇಕು ಅನ್ನೋದು ಫಿಕ್ಸ್! ಹಾಗೇ, ತಂಪು ಕೊಡುವ ಮೊಸರನ್ನೂ ಬಿಡೋದಿಲ್ಲ. ಆದರೆ ಈ ಎರಡನ್ನ ಸೇರಿಸಿ ತಿನ್ನೋದು ಓಕೆನಾ? ಕೆಲವರು ಮ್ಯಾಂಗೋ ಕರ್ಡ್, ಕೆಲವರು ಮ್ಯಾಂಗೋ ಕರ್ಡ್ ರೈಸ್ ಮಾಡ್ತಾರೆ. ಇಷ್ಟು ವರ್ಷ ತಿಂದರೂ ಅದು ಆರೋಗ್ಯಕ್ಕೆ ಚೆನ್ನಾಗಿದೆಯಾ ಅನ್ನೋ ಪ್ರಶ್ನೆ ಕೆಲವರಿಗೆ ಇವತ್ತಿಗೂ ತೊಂದರೆ ಕೊಡುತ್ತೆ. ಈ ವಿಷಯಕ್ಕೆ ಸ್ಪಷ್ಟತೆ ಕೊಡೋಣ ಬನ್ನಿ!

ಪೋಷಕಾಂಶಗಳಲ್ಲಿ ಸಮೃದ್ಧ ಸಂಯೋಜನೆ
ಮಾವು ಮತ್ತು ಮೊಸರು ಎರಡೂ ವಿಭಿನ್ನ ರೀತಿಯ ಪೋಷಕಾಂಶಗಳನ್ನು ಹೊಂದಿವೆ. ಮಾವಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ನೈಸರ್ಗಿಕ ಸಕ್ಕರೆ, ಆಂಟಿಆಕ್ಸಿಡೆಂಟ್ಸ್ ಇರುತ್ತದೆ. ಮೊಸರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ12, ಸತು ಮತ್ತು ಪ್ರೋಬಯೋಟಿಕ್ಸ್ ಇರುತ್ತವೆ. ಈ ಎರಡರ ಮಿಶ್ರಣ ದೇಹಕ್ಕೆ ಸಂಪೂರ್ಣ ಪೋಷಕಾಂಶ ಒದಗಿಸುತ್ತದೆ.

Mango Yogurt and Granola Bowl

ತಕ್ಷಣದ ಶಕ್ತಿ 
ಮಾವಿನ ಹಣ್ಣಿನ ನೈಸರ್ಗಿಕ ಸಕ್ಕರೆ ಮತ್ತು ಮೊಸರಿನ ಪ್ರೋಟೀನ್‌ಗಳು ದೇಹಕ್ಕೆ ತಕ್ಷಣದ ಎನರ್ಜಿ ನೀಡುತ್ತವೆ. ಇದು ಶಕ್ತಿಯ ಕೊರತೆಯಾದವರಿಗೆ, ಮಕ್ಕಳಿಗೆ ಅಥವಾ ವ್ಯಾಯಾಮ ಮಾಡುವವರಿಗೆ ಉಪಯುಕ್ತವಾಗಿದೆ. ಇದನ್ನು ಬೆಳಿಗ್ಗೆ ಅಥವಾ ವ್ಯಾಯಾಮದ ಮುನ್ನ ತಿನ್ನುವುದು ಉತ್ತಮ.

Energy Boost Images - Free Download on Freepik

ರೋಗ ನಿರೋಧಕ ಶಕ್ತಿಯಲ್ಲಿ ಹೆಚ್ಚಳ
ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಇರುವ ಮಾವಿನ ಹಣ್ಣುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಮೊಸರಿನಲ್ಲಿರುವ ಸತು ಮತ್ತು ಪ್ರೋಬಯೋಟಿಕ್ಸ್ ಸಹ ದೇಹವನ್ನು ರೋಗಗಳಿಂದ ಕಾಪಾಡಲು ನೆರವಾಗುತ್ತವೆ. ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ದೇಹ ತಂಪಾಗಿ ಇರಬಹುದು.

5 Ways to Boost Your Immunity

ಆರೋಗ್ಯಕರ ಜೀರ್ಣಕ್ರಿಯೆ
ಮೊಸರಿನಲ್ಲಿರುವ ಪ್ರೋಬಯೋಟಿಕ್‌ಗಳು ಮತ್ತು ಮಾವಿನಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯಕ. ಎರಡು ಸಂಯೋಜನೆಯು ಅಂತರಿಯ ದೇಹಚಟುವಟಿಕೆ ಸುಧಾರಿಸಲು ಸಹಕಾರಿಯಾಗಬಹುದು. ಆದರೆ ಅತಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಕೆಲವರಿಗೆ ಭೇದಿ ಅಥವಾ ಹೊಟ್ಟೆ ಉಬ್ಬರ ಉಂಟಾಗಬಹುದು.

Cary Gastroenterology Associates | Getting to Know Your Digestive…

ಹಿತಮಿತ ಸೇವನೆಯು ಮುಖ್ಯ
ಹೆಚ್ಚು ಸೇವನೆಯಿಂದ ಕೆಲವುವರಿಗೆ ಜೀರ್ಣ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ದಿನದಲ್ಲಿ ಒಂದು ಬಾರಿ, ಅದುವೂ ಸಮತೋಲನದಿಂದ ಸೇವಿಸುವುದು ಉತ್ತಮ. ಹೊಟ್ಟೆ ತುಂಬ ತಿನ್ನುವ ಬದಲಾಗಿ, ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದು ಸುರಕ್ಷಿತ.

8,000+ Eating Mango Stock Photos, Pictures & Royalty-Free Images - iStock | Man eating mango, Woman eating mango, Women eating mango

ಮೊಸರು ಮತ್ತು ಮಾವಿನ ಹಣ್ಣುಗಳನ್ನು ಒಂದಾಗಿ ಸೇರಿಸಿ ತಿನ್ನುವುದು ಸಾಮಾನ್ಯವಾಗಿ ಆರೋಗ್ಯಕರವಾಗಿದೆ. ಆದರೆ ಇದನ್ನು ಹಿತಮಿತವಾಗಿ ಸೇವಿಸಬೇಕು. ಜೀರ್ಣಕ್ರಿಯೆಗೆ ತೊಂದರೆ ಇರುವವರು ಅಥವಾ ಚರ್ಮ ಸಮಸ್ಯೆಗಳಿಂದ ಬಳಲುವವರು ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವನೆ ಮಾಡುವುದು ಒಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!