ಮೇಷ
ಕೆರಿಯರ್‌ಗೆ ಸಂಬಂಧಿಸಿ ಶುಭ ಸುದ್ದಿ. ವರ್ತಮಾನಕ್ಕೆ ತಕ್ಕಂತೆ ನಿಮ್ಮ ಬದುಕನ್ನು ಹೊಂದಾಣಿಸಿಕೊಳ್ಳಿ. ಹಳೆಯದಕ್ಕೇ ಅಂಟದಿರಿ.
ವೃಷಭ
ವೃತ್ತಿ ಹಾಗೂ ಇನ್ನಿತರ ವಿಷಯಗಳಿಗೆ ಆದ್ಯತೆ ನೀಡಿ ಪ್ರೀತಿಯ ವಿಷಯ ಕಡೆಗಣಿಸಿದ್ದೀರಿ. ಹಾಗೆ ಮಾಡದಿರಿ. ಆಪ್ತರ ಕುರಿತೂ ಗಮನವಿರಲಿ.
ಮಿಥುನ
ಗಡುವಿನೊಳಗೆ ಕೆಲಸ ಪೂರೈಸುವ ಒತ್ತಡ. ಹೊಸ ಸಂಬಂಧ ಕುದುರಬಹುದು. ಭವಿಷ್ಯದ ಬಗ್ಗೆ ಸರಿಯಾದ ಯೋಜನೆ ಹಾಕಿಕೊಳ್ಳಿ.
ಕಟಕ
ಹೊಸ ಉದ್ಯೋಗ ಅವಕಾಶ ಬರಬಹುದು. ನಿಮ್ಮ ವ್ಯಕ್ತಿತ್ವ ಸುಧಾರಿಸುವ ಅಗತ್ಯವಿದೆ. ನಡೆನುಡಿಯಲ್ಲಿ ಹೆಚ್ಚು ಪ್ರಬುದ್ಧತೆಯಿರಲಿ.
ಸಿಂಹ
ಅವಶ್ಯಕತೆಗೆ ತಕ್ಕಂತೆ ಕೆಲಸ ನಿರ್ವಹಿಸಿ. ಹಿರಿಯರ ಮಾರ್ಗದರ್ಶನ ಪಡೆಯಿರಿ. ಖರ್ಚು ಹೆಚ್ಚಲಿದೆ. ದಿನವಿಡೀ ಒತ್ತಡ, ಸಂಜೆ ನಿರಾಳತೆ.
ಕನ್ಯಾ
ನಿಮ್ಮ ಸ್ವಭಾವ ತಿದ್ದಿಕೊಳ್ಳಬೇಕಾದ ಅಗತ್ಯ ಕಂಡೀತು. ಪರಿಸ್ಥಿತಿ ಹಾಗೆ ಮಾಡಲಿದೆ. ಸಿಟ್ಟುಸೆಡವು ನಿಯಂತ್ರಿಸಿಕೊಳ್ಳಿ. ಒತ್ತಡಕ್ಕೆ ಬಲಿಯಾಗದಿರಿ.
ತುಲಾ
ಇಂದು ನಿಮ್ಮ ಕೋಪ ನಿಯಂತ್ರಣ ಅವಶ್ಯ. ನಿಮ್ಮದು ತಂಡ ಪ್ರಯತ್ನ.ಎಲ್ಲರ ಭಾವನೆಗೆ ಬೆಲೆ ಕೊಡಿ.ಆದರೆ ಎಲ್ಲರನ್ನು ಕುರುಡಾಗಿ ನಂಬದಿರಿ.
ವೃಶ್ಚಿಕ
ನಿಮ್ಮ ಭಾವನೆಗೆ ರೆಕ್ಕೆ ಬಂದೀತು. ಆಪ್ತರಿಂದ ಸೂಕ್ತ ಸ್ಪಂದನ. ಕನಸು ಸಾಕಾರ. ಸಣ್ಣ ಆರೋಗ್ಯ ಸಮಸ್ಯೆ ಕಾಡಬಹುದು. ಮುನ್ನೆಚ್ಚರಿಕೆ ವಹಿಸಿ.
ಧನು
ಫಲಪ್ರದ ದಿನ. ಬಾಕಿಯಿರುವ ಮುಖ್ಯ ಕೆಲಸ ಇಂದು ಪೂರ್ಣ. ಆತ್ಮೀಯ ವ್ಯಕ್ತಿಯೊಬ್ಬರ ಭೇಟಿಯಾಗುವ ಸಾಧ್ಯತೆ. ಖರ್ಚು ನಿಯಂತ್ರಿಸಿ.
ಮಕರ
ಸರಿಯಾದ ಆರ್ಥಿಕ ಯೋಜನೆ ಹಾಕಿಕೊಂಡು ಮುನ್ನಡೆಯಿರಿ. ಇಲ್ಲವಾದರೆ ಆರ್ಥಿಕ ಬಿಕ್ಕಟ್ಟು ಕಾಡಬಹುದು. ಬಂಧುಗಳ ಕಿರಿಕಿರಿ.
ಕುಂಭ
ವೃತ್ತಿ ಕ್ಷೇತ್ರದ ಒಳಹೊರಗನ್ನು ಸರಿಯಾಗಿ ಅರಿತುಕೊಳ್ಳಿ. ಮೇಲೆ ಕಂಡಂತೆ ಒಳಗೆ ಇರುವುದಿಲ್ಲ. ಎಚ್ಚರದಿಂದ ವ್ಯವಹರಿಸಿರಿ.
ಮೀನ
ಪ್ರಯತ್ನವೊಂದು ವಿಫಲವಾಯಿತು ಎಂದುಕೊಂಡರೂ ಅದರ ಫಲ ಈಗ ಸಿಗಲಿದೆ. ಆರ್ಥಿಕವಾಗಿ ಉನ್ನತಿ. ಬಂಧುಗಳ ಭೇಟಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ