ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿ ಮರು ಸಮೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿಸುತ್ತೇನೆ, ಇದರ ಬದಲು ಕನ್ನಡ ಭಾಷಿಕರ ಸಮೀಕ್ಷೆ ಮಾಡಿ ಎಂದು ಕನ್ನಡ ಚಳವಳಿ ಮುಖಂಡ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಇದ್ದಂತೆ ಇಲ್ಲ. ಎರಡನೇ ಅವಧಿಯಲ್ಲಿ ಬಲಹೀನರಾಗಿದ್ದಾರೆ. ಮರು ಜಾತಿಗಣತಿ ವಿಚಾರದಲ್ಲಿ ಒಪ್ಪಿಕೊಂಡಿದ್ದಾರೆ. ನೂರಾರು ನಾಗರಹಾವುಗಳ ಮಧ್ಯೆ ಸಿದ್ದರಾಮಯ್ಯ ಸಿಲುಕಿಕೊಂಡಿದ್ದಾರೆಂದು ಕಿಡಿಕಾರಿದರು.
ಮೈಸೂರಿನಲ್ಲಿ ಅನ್ಯ ಭಾಷಿಕರ ಪ್ರಾಬಲ್ಯ ಹೆಚ್ಚಾಗುತ್ತಿದೆ. ಆದ್ದರಿಂದ ಕರ್ನಾಟಕದಲ್ಲಿ ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಎಂದು ಸರ್ಕಾರ ಗಣನೆ ಮಾಡಬೇಕು. ಕನ್ನಡ ಭಾಷಿಕರು ಮತ್ತು ಪರ ಭಾಷಿಕರು ಎಷ್ಟಿದ್ದಾರೆ ಎಂದು ಲೆಕ್ಕ ಹಾಕಬೇಕು. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಭಾಷೆ ಯನ್ನೇ ಎಲ್ಲಾ ವಿಷಯಕ್ಕೂ ಬಳಸು ವುದು ಬೇಡ?, 1956 ನೇ ಇಸವಿ ಯಲ್ಲಿ ಬಹು ಭಾಶೀಕರನ್ನು ಆಡಳಿತಕ್ಕೆ ಒಂದು ಮಾಡಿದರು. ಭಾರತ ಪಾಕಿಸ್ತಾನದ ರೀತಿ ದೇಶ ವಿಭಜನೆ ಮಾಡಲಿಲ್ಲ. ಅಖಂಡ ಕರ್ನಾಟಕದಲ್ಲಿ ಅನೇಕ ಭಾಷೆ ಇವೇ. ಅದೇ ವಿಶೇಷ
ಹೈದೆರಾಬಾದ್, ಮದ್ರಾಸ್ ಮುಂಬೈ ರಾಜ್ಯಗಳಿಂದ ಅನೇಕ ಜಿಲ್ಲೆ ಸೇರಿಸಲಾಗಿದೆ. ಸಂವಿಧಾನ ಎಲ್ಲಾ ಭಾಷೆಗಳನ್ನು ಸಮನಾಗಿ ನೋಡಬೇಕೆಂದು ಹೇಳಿದೆ. ಸರ್ವ ಜನಾಂಗೀಯ ಸುಂದರ ತೋಟ ಇದು ನಮ್ಮ ಕರ್ನಾಟಕ.