‘‘ಇದು ನಮ್ಮ ಲೈಫ್ ಟೈಮ್ ಲವ್’’ ಅಂದಿದ್ದ ಜೋಡಿ ಕೆಲವೇ ತಿಂಗಳಿನಲ್ಲಿ ದೂರವಾಗಿದ್ದನ್ನ ನೋಡಿದ ಅನುಭವ ನಮಗೆ ಖಂಡಿತ ಇದೆ? ಅದೆಷ್ಟು ಬಾರಿ ನಿಜವಾದ ಪ್ರೀತಿ ಇದ್ದರೂ, ಸಂಬಂಧಗಳು ತೀವ್ರತೆ ಕಳೆದುಕೊಂಡು, ಕೊನೆಗೆ ಪರಸ್ಪರ ಅಂತರಕ್ಕೆ ದಾರಿ ಮಾಡಿಕೊಡುತ್ತವೆ. ಈ ಹಿಂದೆ ಎಲ್ಲವೂ ಚೆನ್ನಾಗಿತ್ತು, ಅಂದ್ರೆ ಇಷ್ಟು ಬೇಗ ಏನಾಯಿತು ಅನ್ನೋ ಪ್ರಶ್ನೆ ಎದ್ದುಬರುತ್ತದೆ.
ಮನೋವಿಜ್ಞಾನದ ಪ್ರಕಾರ, ಪ್ರೀತಿ ಮಾತ್ರ ಸಾಕಾಗಲ್ಲ, ಸಂಬಂಧವನ್ನು ದೀರ್ಘಕಾಲ ಉಳಿಯಲು ಇನ್ನೂ ಹಲವಾರು ಅಂಶಗಳು ಬೇಕಾಗಿವೆ. ಪ್ರೀತಿಯ ಈ ದೋಣಿಗೆ ಕೆಲವೊಮ್ಮೆ ಕಾಣದ ಬಿರುಕುಗಳು ಬೀಳುತ್ತವೆ. ಪ್ರೀತಿಯಿದ್ದರೂ ಸಂಬಂಧ ಕಡಿದುಹೋಗೋಕೆ ಕಾರಣವಾಗೋ ಕೆಲವೇ ಪ್ರಮುಖ ಆದರೆ ಸಾಮಾನ್ಯ ತಪ್ಪುಗಳು ಇವು
ಮಾತುಕತೆ ನಿಲ್ಲಿಸೋದು
ಆರಂಭದಲ್ಲಿ ಪ್ರತಿ ಮಾತಿಗೂ ಮೆಸೇಜ್ ಮಾಡೋದು, ಲವ್ ಇಮೋಜಿ, ಫೋನ್ ಕಾಲ್, ಆದರೆ ಕಾಲಹರಣದೊಡನೆ ಮಾತನಾಡುವ, ಕೇಳಿಕೊಳ್ಳುವ ಇಚ್ಛೆ ಕಡಿಮೆಯಾದ್ರೆ? ಭಾವನೆ, ಕೋಪ, ಕಾಳಜಿಗಳು ಹಂಚಿಕೊಳ್ಳದೇ ಹೋದ್ರೆ, ಅಲ್ಲಿ ದೂರತಾನೇ ಹುಟ್ಟತ್ತೆ. ಸಂಬಂಧ ಉಳಿಸಬೇಕು ಅಂದ್ರೆ ಮಾತು ಮರೀಬಾರದು.
ಒಂದೇ ರೀತಿಯ ದಿನಚರಿ
ಪ್ರತಿ ದಿನವೂ ಒಂದೇ ತರಹ, ಒಂದೇ ಮಾತು, ಒಂದೇ ಚಟುವಟಿಕೆ. ಆರಂಬದ ಡೇಟ್‌ಗಳ ಉತ್ಸಾಹ, ಸರ್ಪ್ರೈಸ್‌ಗಳು ಬಿಟ್ಟರೆ ಸಂಬಂಧ ‘ರೂಟಿನ್’ ಆಗಿ ಹೋಗುತ್ತೆ. ವಿನೋದ, ಹೊಸತನ, ಇಲ್ಲದೆ ಸಂಬಂಧ ‘ಸಾಧಾರಣ’ ಆಗಿ ಬಿಡುತ್ತೆ. ಆಗ ಶುರುವಾಗುತ್ತೆ ಅತೃಪ್ತಿ.
ಬಗೆಹರಿಯದ ಜಗಳ
ಸಣ್ಣ ಸಣ್ಣ ಜಗಳಗಳನ್ನ ನಿಲ್ಲಿಸದಿದ್ರೆ, ನಿರ್ಲಕ್ಷ್ಯ ಮಾಡಿದ್ರೆ, ಅದು ಮುಂದೆಯೇ ದೊಡ್ಡ ಸಮಸ್ಯೆಯಾಗಿ ಬದಲಾಗಬಹುದು. ಯಾಕೆಂದರೆ unresolved issues = emotional distance.
ಜೀವನದ ಗುರಿಗಳ ವ್ಯತ್ಯಾಸ
ಒಬ್ಬರು ವೃತ್ತಿಜೀವನದಲ್ಲಿ ಬೆಳೆಯಬೇಕೆಂಬ ಕನಸು, ಮತ್ತೊಬ್ಬರು ಕುಟುಂಬದ ಕನಸು. ಆಸೆ-ಆಕಾಂಕ್ಷೆಗಳ ವ್ಯತ್ಯಾಸ ಮಾತನಾಡದೆ ಹೋಗಿದ್ರೆ, ಅದು ಹತಾಶೆಗೆ ದಾರಿ ಮಾಡಿಕೊಡುತ್ತೆ. ಇಬ್ಬರೂ ಚೆನ್ನಾಗಿ ಪ್ರೀತಿಸಿದರೂ ‘ಒಟ್ಟಿಗೆ ಇರುವ ಭವಿಷ್ಯ’ ಕಲ್ಪನೆ ಕಷ್ಟವಾಗಬಹುದು.
ಒಬ್ಬರನ್ನೊಬ್ಬರು ಲಘುವಾಗಿ ತೆಗೆದುಕೊಳ್ಳೋದು
ಧನ್ಯವಾದ, ಸ್ಮೈಲ್, ಒಂದಿಷ್ಟು ಮೆಚ್ಚುಗೆ – ಇವು ಮರೆತುಹೋದ್ರೆ ಪ್ರೀತಿಯ ತಾಜಾತನವೂ ಕಡಿಮೆಯಾಗುತ್ತದೆ. ಕಾಳಜಿ ತೋರಿಸದ ಸಂಬಂಧ ‘ಇನ್ನೊಬ್ಬರ ಬಗ್ಗೆ ಅನುಮಾನ’ ಅನ್ನೋ ಬಾಗಿಲಿಗೆ ತಲುಪುತ್ತೆ. ಪ್ರೀತಿಯೂ ನಿರ್ಲಕ್ಷ್ಯದ ಒಳಗೊಂದು ರೂಪಾಂತರಾಗಬಹುದು.
ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದಿರುವುದು
ಸಂಬಂಧ ಬಲವಾಗಿರಬೇಕೆಂದರೆ ಕೇಳುವ ಕೌಶಲ್ಯವೂ ಇರಬೇಕು. ಸಂಗಾತಿಯ ಭಾವನೆಗಳಿಗೆ ಕಿವಿಗೊಡದೆ ಇದ್ದರೆ ಅವರು ತನ್ನೆಲ್ಲ ಕಾಳಜಿ ಮರೆತುಹೋಗಿದ್ದರೆ ಎಂಬ ಭಾವನೆಗೆ ಒಳಗಾಗುತ್ತಾರೆ. ಇದು ಮನಸ್ಸಿಗೆ ಹಿಂಸೆಯೇ ತಾನೇ?
ಸಂಬಂಧಗಳನ್ನು ಬೆಳೆಸೋದೂ, ಉಳಿಸೋದೂ ಕಲೆ. ಪ್ರೀತಿ ಬಿತ್ತಿದರೂ, ನಿರಂತರ ಪೋಷಣೆ ಇಲ್ಲದಿದ್ರೆ ಅದು ಬೆಲೆ ಕೊಡಲ್ಲ. ಪ್ರತಿದಿನವೂ ಒಂದಿಷ್ಟು ಮಾತು, ಪ್ರಾಮಾಣಿಕತೆ, ಆಲಿಸೋ ತಾಳ್ಮೆ, ಮತ್ತು ಹೊಸತನಕ್ಕೆ ಅವಕಾಶ ಕೊಡೋದರಿಂದ ನೀವು ಪ್ರೀತಿಯ ಬಗೆಗೆ ಯೋಚನೆ ಮಾಡಬಹುದು. (ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟಗೊಂಡಿದೆ)