ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಳೇ ಪ್ರೇಮಕಥೆಗಳು ಮರಳಿ ಸದ್ದು ಮಾಡೋದು ಒಂದು ವಿಶಿಷ್ಟ ಅನುಭವ. ಅಂತಹದೇ ಒಂದು ಚಿತ್ರ ‘ಏ ಮಾಯಾ ಚೇಸಾವೆ’. ಇದು 2010ರಲ್ಲೇ ಬಿಡುಗಡೆಯಾದರೂ ಇಂದು ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಒಂದಿಷ್ಟು ಜಾಗವನ್ನು ಕಾಯ್ದುಕೊಂಡಿದೆ. ನಾಗ ಚೈತನ್ಯ ಮತ್ತು ಸಮಂತಾ ನಟನೆಯ ಈ ಸಿನಿಮಾ ಅವರ ವೃತ್ತಿಜೀವನವನ್ನೂ, ಖಾಸಗಿ ಜೀವನವನ್ನೂ ಬದಲಾಯಿಸಿದ ಚಿತ್ರ ಎಂಬುದರಲ್ಲಿ ಸಂಶಯವೇ ಇಲ್ಲ.
ಇದು ತೆಲುಗು ಚಿತ್ರರಂಗದಲ್ಲಿ ಹೊಸತನ ತಂದ ಸಿನಿಮಾ. ಸಿನಿಮಾ ಮಾತ್ರವಲ್ಲ, ಸೆಟ್ನಲ್ಲೇ ಚೈತನ್ಯ ಮತ್ತು ಸಮಂತಾನಡುವೆ ಪ್ರೀತಿ ಮೊಳೆತಿದ್ದು, ಅದು ಮದುವೆಯವರೆಗೆ ಸಾಗಿತ್ತು. ಅಭಿಮಾನಿಗಳು ‘ಚಾಯ್-ಸ್ಯಾಮ್’ ಜೋಡಿ ಎಂದು ಖುಷಿಯಿಂದ ಹೆಸರಿಟ್ಟಿದ್ದರು. ಆದರೆ ಅಷ್ಟೊಂದು ಮಧುರ ಸಂಬಂಧ 2021ರಲ್ಲಿ ವಿಚ್ಛೇದನದಲ್ಲಿ ಅಂತ್ಯ ಕಂಡಿತು.
ಈಗ ಈ ಸಿನಿಮಾ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ಸುದ್ದಿ ಕೇಳಿ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಇಷ್ಟೊಂದು ವರ್ಷಗಳ ನಂತರ ಈ ಸಿನಿಮಾ ತೆರೆ ಕಾಣುತ್ತಿರುವುದು ಭಿನ್ನ ಅನುಭವ. ಆದರೆ ಅಷ್ಟಕ್ಕೂ ಇದೇ ಚಿತ್ರದಿಂದ ಪ್ರಾರಂಭವಾದ ಸಂಬಂಧವನ್ನು, ಈ ಚಿತ್ರದ ಮರುಬಿಡುಗಡೆ ಮತ್ತೆ ಒಂದಷ್ಟು ನೆನಪುಗಳು ತಂದುಕೊಡೋದು ಗ್ಯಾರಂಟಿ.
ಹೆಚ್ಚಾಗಿ ಈಗ ಬರೋ ಪ್ರಶ್ನೆ ಏನೆಂದರೆ – ಈ ಚಿತ್ರದ ಪ್ರಚಾರಕ್ಕಾಗಿ ಸಮಂತಾ ಮತ್ತು ಚೈತನ್ಯ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಬಹುದಾ? ಇಬ್ಬರೂ ಬಹುಕಾಲದಿಂದ ತಮ್ಮ ಜೀವನದಲ್ಲಿ ಬೇರಬೇರೆಯ ದಾರಿಗೆ ಹೋಗಿದ್ದಾರೆ. ಆದರೆ ಈ ಮರುಬಿಡುಗಡೆ ಅವರಿಗೆ ಮತ್ತೆ ಒಟ್ಟಿಗೆ ತರಬಹುದಾ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ.
ಸೋಷಿಯಲ್ ಮೀಡಿಯಾದಲ್ಲಂತೂ ಅಭಿಮಾನಿಗಳ ಮಾತುಗಳೇ ಓಡಾಡುತ್ತಿವೆ. ಯಾರೊಬ್ಬರು ‘ಒಮ್ಮೆ ನೋಡಲೇಬೇಕು ಈ ಜೋಡಿಯನ್ನು ಮತ್ತೆ’ ಎನ್ನುತ್ತಿದ್ದಾರೆ, ಇನ್ನೊಬ್ಬರು ‘ವೃತ್ತಿಪರವಾಗಿ ಪ್ರಚಾರಕ್ಕಾಗಿ ಒಂದಾಗೋದು ಸರಿ’ ಎನ್ನುತ್ತಿದ್ದಾರೆ.