ಇಂದು ನಾವೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ವಿಷಯಗಳನ್ನು ಹಂಚಿಕೊಳ್ಳುವ ಯುಗದಲ್ಲಿ ಬದುಕುತ್ತಿದ್ದೇವೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ಈ ಬಗ್ಗೆಯೂ ಎಚ್ಚರಿಕೆ ನೀಡಿದವರು ಇದ್ದಾರೆ – ಅವರು ಯಾವ ಮಾಮೂಲಿ ವ್ಯಕ್ತಿಯಲ್ಲ, ನಿತಿಶಾಸ್ತ್ರದಲ್ಲಿ ಪ್ರಾವೀಣ್ಯ ಹೊಂದಿದ್ದ ಚಾಣಕ್ಯಾಚಾರ್ಯ. ಇವರು ತಿಳಿಸಿದಂತೆ, ಪುರುಷರು ಜೀವನದಲ್ಲಿ ಕೆಲವೊಂದು ವಿಷಯಗಳನ್ನು ಯಾರ ಜೊತೆಯೂ ಎಂದಿಗೂ ಹಂಚಿಕೊಳ್ಳಬಾರದು. ಹಂಚಿದ್ರೆ ಅದು ಅವರ ವೈಯಕ್ತಿಕ ಜೀವನ, ಗೌರವ, ಸ್ಥಿತಿ, ಶಾಂತಿ ಎಲ್ಲವನ್ನೂ ನಾಶವಾಗಬಹುದಂತೆ.
ನಿಮ್ಮ ಅವಮಾನ ಯಾರಿಗಾದರೂ ಹೇಳಬೇಡಿ
ಪುರುಷರು ತಾನು ಅನುಭವಿಸಿದ ಅವಮಾನವನ್ನು ಯಾರ ಜೊತೆಯೂ ಹಂಚಿಕೊಳ್ಳಬಾರದು. ನಾವು ನಮ್ಮನ್ನು ನಿಂದಿಸಿರುವವರ ಬಗ್ಗೆ ಮಾತನಾಡಿದ್ರೆ, ಇತರರು ಅದನ್ನು ಗಂಭೀರವಾಗಿ ಪರಿಗಣಿಸದೆ ಗೇಲಿ ಮಾಡಲು ಪ್ರಾರಂಭಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಮೌನವೇ ಶ್ರೇಷ್ಠ.
ಹೆಂಡತಿಯ ಸ್ವಭಾವ ಅಥವಾ ವೈಯಕ್ತಿಕ ವಿಷಯ ಯಾರ ಜೊತೆಯೂ ಹಂಚಿಕೊಳ್ಳಬಾರದು
ಪತಿಯೊಬ್ಬನು ತನ್ನ ಹೆಂಡತಿಯ ನಡವಳಿಕೆ, ದೋಷಗಳು ಅಥವಾ ಕ್ರೋಧದ ಬಗ್ಗೆ ಇತರರೊಂದಿಗೆ ಮಾತನಾಡಿದ್ರೆ, ಅದು ಸಂಬಂಧದಲ್ಲಿ ಬೇಡದ ಬಿಕ್ಕಟ್ಟು ತರಬಹುದು. ಅದರ ಪರಿಣಾಮವಾಗಿ ಕುಟುಂಬ ಮತ್ತು ಸ್ನೇಹ ಸಂಬಂಧಗಳು ಹದಗೆಡಬಹುದು.
ದುಃಖ ಮತ್ತು ದುರ್ಬಲತೆ ವ್ಯಕ್ತಪಡಿಸಬೇಡಿ
ಪ್ರತಿಯೊಬ್ಬ ವ್ಯಕ್ತಿಗೂ ಕೆಲ ದುಃಖ, ನೋವುಗಳು ಇರುತ್ತವೆ. ಆದರೆ ಅವುಗಳನ್ನು ಎಲ್ಲರೊಡನೆ ಹಂಚಿಕೊಂಡರೆ, ಕೆಲವರು ಅದನ್ನು ನಿಮ್ಮ ವಿರುದ್ಧವೇ ಬಳಸಬಹುದು. ನಿಮ್ಮ ದುಃಖವನ್ನು ಒಳಗೊಳಗೇ ಇರಿಸಿಕೊಂಡರೆ, ನಿಜವಾದ ಶಕ್ತಿ ಬೆಳೆಯುತ್ತದೆ.
ಹಣದ ಬಗ್ಗೆ ಹೆಚ್ಚು ಮಾತನಾಡಬೇಡಿ
ಹಣವು ಪುರುಷನ ಶಕ್ತಿ. ಆದರೆ ಅದನ್ನು ಎಲ್ಲರೊಂದಿಗೆ ಚರ್ಚಿಸಿದರೆ, ಕೆಲವರು ಅದನ್ನು ಶೋಷಿಸಲು ಯತ್ನಿಸಬಹುದು. ಕೆಲವರು ಈ ಮೂಲಕ ಜಗಳ, ಹೆಮ್ಮೆ ಅಥವಾ ಈಷ್ರ್ಯೆ ಉಂಟುಮಾಡಬಹುದು. ಹೀಗಾಗಿ ಹಣ ಸಂಪಾದನೆಯ ವಿಷಯವನ್ನು ಶಾಂತಿಯಾಗಿ, ಬುದ್ಧಿವಂತಿಕೆಯಿಂದ ನಿರ್ವಹಿಸಬೇಕು.
ಹಣಕ್ಕೆ ಗೌರವ ನೀಡಿ
ಹಣವನ್ನು ಬೇಕಾದ್ದಂತೆ ಖರ್ಚು ಮಾಡುವುದು, ತೋರಾಟದ ಆಸೆಗಳಿಗೆ ವ್ಯಯಿಸುವುದು ಎಲ್ಲವೂ ನಿಮ್ಮ ಹಣಕಾಸಿನ ಸ್ಥಿತಿಯನ್ನು ಹಾಳುಮಾಡುತ್ತದೆ. ಬಜೆಟ್ ಮಾಡಿ, ಉಳಿತಾಯ ಮಾಡಿ, ಬುದ್ದಿಮತ್ತೆಯಿಂದ ಹೂಡಿಕೆ ಮಾಡಿ. ಒಂದೇ ಆದಾಯದ ಮೂಲವನ್ನೇ ನಂಬದೆ, ಬದಲಿ ಆಯ್ಕೆಗಳನ್ನು ರೂಪಿಸಿ.
ಸಮಯದ ಮೌಲ್ಯವನ್ನು ಅರಿತುಕೊಳ್ಳಿ
ಹಣಕ್ಕಿಂತಲೂ ಅಮೂಲ್ಯವಾದದ್ದು ಸಮಯ. ಅದನ್ನು ವ್ಯರ್ಥಗೊಳಿಸುವುದು ದೊಡ್ಡ ತಪ್ಪು. ದಿನದ ಪ್ರತೀ ಕ್ಷಣಕ್ಕೂ ಮೌಲ್ಯ ಇದೆ. ಸಮಯವನ್ನು ಗೌರವಿಸುವವನು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾನೆ.
ಕೆಟ್ಟವರ ಜೊತೆಯಲ್ಲಿ ಇರಬೇಡಿ
ನಿಮ್ಮ ಸುತ್ತಲಿನ ಮನುಷ್ಯರು ನಿಮ್ಮ ಜೀವನದ ದಿಕ್ಕನ್ನು ತೀರ್ಮಾನಿಸುತ್ತಾರೆ. ಸೋಮಾರಿಗಳು, ಕುಡುಕರು, ನಕಾರಾತ್ಮಕ ಮನಸ್ಥಿತಿಯವರು – ಇವರೆಲ್ಲರ ಸಹವಾಸವು ನಿಮ್ಮ ಹಣ, ಗೌರವ ಮತ್ತು ಶಾಂತಿಯನ್ನು ನಾಶಮಾಡುತ್ತದೆ. ಯಾವಾಗಲೂ ಸಕಾರಾತ್ಮಕ, ನಿಮ್ಮನ್ನು ಉತ್ತೇಜಿಸುವ ಜನರ ಜೊತೆಗೇ ಇರಿ.
ಈ ಎಲ್ಲಾ ಮಾತುಗಳು ಇಂದು ನಾವೆಲ್ಲರೂ ಅನುಸರಿಸಬಹುದಾದ, ಜಾಗರೂಕತೆಯಿಂದ ಜೀವನ ನಡೆಸಬಹುದಾದ ಮಾರ್ಗಗಳನ್ನು ನೀಡುತ್ತವೆ. ತಾಂತ್ರಿಕವಾಗಿ, ಇವು “ಗುಟ್ಟಾಗಿ ಇಡುವಂತಹ” ವಿಷಯಗಳು ಅನ್ನೋದು ಮಾತ್ರವಲ್ಲ – ಇವು ನಿಮ್ಮ ಜೀವನದ ನೆಲೆಯನ್ನು ಗಟ್ಟಿಗೊಳಿಸುವ ಮೂಲಭೂತ ತತ್ವಗಳು. ಮಾತುಗಳಿಗೂ, ಸಂಬಂಧಗಳಿಗೂ, ಹಣಕ್ಕೂ, ಸಮಯಕ್ಕೂ ಮಿತಿಮೀರಿ ನಂಬಿಕೆ ಇಟ್ಟರೆ ಅವುಗಳು ನಮಗೆ ಮಾರಕವಾಗಬಹುದು.