ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಮರ ಸದ್ಯಕ್ಕಂತೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಈ ಎರಡೂ ದೇಶಗಳ ನಡುವಿನ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯ ಪ್ರವೇಶಿಸಿದ್ದಾರೆ.
ಈ ಹಿಂದೆ ಇಸ್ರೇಲ್ ಜೊತೆ ಕದನವಿರಾಮ ಮಾಡಿಕೊಳ್ಳುವಂತೆ ಇರಾನ್ಗೆ ಟ್ರಂಪ್ ಸಲಹೆ ನೀಡಿದ್ದರು. ಆದರೆ, ಈಗ ಯಾವುದೇ ಕದನವಿರಾಮ ಇಲ್ಲ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ನಿಜವಾದ ಮತ್ತು ಶಾಶ್ವತವಾದ ಅಂತ್ಯಸಿಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಹಾಗೇ, ಶಾಂತಿ ಮಾತುಕತೆಗಾಗಿ ಇರಾನ್ ಅನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಿಲ್ಲ ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್ ದೇಶವು ಒಪ್ಪಂದವನ್ನು ಪರಿಗಣಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.