ಹೊಸದಿಗಂತ ಬೀದರ್
ಭಾಲ್ಕಿ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ – ₹16.5 ಕೋಟಿ ಹೂಡಿಕೆಯಲ್ಲಿ ನೂತನ 150 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ
ಭಾಲ್ಕಿ ಕ್ಷೇತ್ರದ ಜನತೆಗೆ ಸುಧಾರಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ದೃಢ ನಿಟ್ಟಿನಲ್ಲಿ, ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಭಾಲ್ಕಿ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಈಶ್ವರ ಖಂಡ್ರೆ ಅವರ ಶ್ರಮಪೂರ್ವಕ ಕಾಳಜಿಯಿಂದ ₹16.5 ಕೋಟಿ ವೆಚ್ಚದಲ್ಲಿ 150 ಹಾಸಿಗೆಗಳ ಹೊಸ ಹೈಟೆಕ್ ಸಾರ್ವಜನಿಕ ಆಸ್ಪತ್ರೆಯ ನಿರ್ಮಾಣ ಭಾಲ್ಕಿ ಪಟ್ಟಣದಲ್ಲಿ ನಡೆಯುತ್ತಿದೆ.
ಇಂದು ಸಚಿವ ಈಶ್ವರ ಖಂಡ್ರೆ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ಕಾಮಗಾರಿಯ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭ, ಕಾಮಗಾರಿ ಗುತ್ತಿಗೆದಾರರಿಗೆ ಸಮರ್ಪಕ ಗುಣಮಟ್ಟವನ್ನು ಕಾಯ್ದುಕೊಂಡು, ನಿರ್ಧರಿಸಿದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಆಸ್ಪತ್ರೆ ನಿರ್ಮಾಣದಿಂದ ಭಾಲ್ಕಿ ಭಾಗದ ನಾಗರಿಕರಿಗೆ ಆಧುನಿಕ ವೈದ್ಯಕೀಯ ಸೌಲಭ್ಯ ಲಭ್ಯವಾಗಲಿದ್ದು, ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ದಾರಿ ತೆಗೆಯಲಿದೆ.
ಖಂಡ್ರೆ ಸಾಹೇಬರು ತಮ್ಮ ಇಲಾಖೆಯ ಪ್ರತಿಯೊಂದು ವಲಯ ಅರಣ್ಯಾಧಿಕಾರಿಗಳ ನೆಡುತೋಪುಗಳ ಪರಿವೀಕ್ಷಣೆ ಮತ್ತು ವಲಯವಾರು ದೂರುದಾರರ ಅಹವಾಲುಗಳನ್ನು,ಅಧಿಕಾರಿಗಳ
ಲೋಪದೋಷಗಳನ್ನು,ಹದ್ದು ಮೀರಿ,ಕಾನೂನಿನ ವಿರುದ್ಧವಾಗಿ ನಿಭಾಯಿಸುವ ಪ್ರಕರಣಗಳನ್ನು ತನಿಖೆ ನಡೆಸಿ ಪರಿಸರ ಸಮತೋಲ
ಕೈಮೀರಿ ಹೋಗದಂತೆ ಕ್ರಮ ಕೈಗೊಳ್ಳಲು ಸಹ ಯತ್ನ ನಡೆಸಲಿ.