ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ, ಬಾಂಗ್ಲಾ ವಲಸಿಗರ ಉಚ್ಚಾಟನೆ: ಡಾ.ಪ್ರವೀಣ್ ತೊಗಾಡಿಯಾ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಯಾಗಬೇಕು. ಬಾಂಗ್ಲಾ ವಲಸಿಗರನ್ನು ಹೊರಹಾಕಬೇಕು ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ನ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರವೀಣ್ ತೊಗಾಡಿಯಾ ಪ್ರತಿಪಾದಿಸಿದ್ದಾರೆ.

ವಿಜಯಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು, ದೇಶದಲ್ಲಿ ಹಿಂದು ಸಮುದಾಯಕ್ಕೆ ಸಮಸ್ಯೆಯಾದರೆ ನಮ್ಮ ಸಂಘಟನೆಗಳು ತಕ್ಷಣ ಪ್ರತಿಕ್ರಿಯಿಸುತ್ತದೆ. 10 ಸಾವಿರ ವೈದ್ಯರು ಆರೋಗ್ಯ ತಪಾಸಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. 30 ಸಾವಿರ ಹನುಮಾನ್ ಚಾಲೀಸ ಕೇಂದ್ರಗಳಿದ್ದು, ಅವುಗಳನ್ನು ಒಂದು ಲಕ್ಷಕ್ಕೇರಿಸುವ ಗುರಿ ಇದೆ ಎಂದು ಹೇಳಿದರು.

ಹಿಂದೂ ರಕ್ಷಾ ಅಭಿಯಾನದ ಮೂಲಕ ಸಹಾಯ ನೀಡಲಾಗುತ್ತಿದೆ. ಎರಡು ಕೋಟಿ ಮನೆಗಳಿಗೆ ಒಂದು ವರ್ಷದಲ್ಲಿ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿದೆ. ಹಿಂದುಗಳಷ್ಟೇ ಅಲ್ಲ ಅನ್ಯಧರ್ಮಗಳಲ್ಲೂ ಜಾತಿ ತಾರತಮ್ಯ ಇದೆ ಎಂದು ತಿಳಿಸಿದರು. ವಿಶ್ವ ಹಿಂದೂ ಪರಿಷತ್ ನಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಲಕ್ನೋದಿಂದ ಅಯೋಧ್ಯೆವರೆಗೂ ಜಾಥಾ ನಡೆಸಲಾಗಿತ್ತು. ಕುಂಭಮೇಳದಲ್ಲಿ 5 ಲಕ್ಷ ಜನರಿಗೆ ವಸತಿ ಹಾಗೂ ಆಹಾರ ಸೌಲಭ್ಯ ಕಲ್ಪಿಸಲಾಗಿತ್ತು. ಕೊರೋನಾದ ವೇಳೆ 578 ಉಚಿತ ಆಹಾರ ಕೇಂದ್ರಗಳು ಸಕ್ರಿಯವಾಗಿದ್ದವು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!